ಸ್ವರ್ಣಮಯ ತ್ರಿನೇತ್ರ, ಮಲ್ಲಿಗೆ ಹಾರ ಸಮರ್ಪಣೆ, ಶ್ರೀ ರುದ್ರಯಾಗ, ಚಂಡಿಕಾ ಹೋಮ
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಅ.15ರಿಂದ ಅ.25ರವರೆಗೆ ನವರಾತ್ರಿ ಉತ್ಸವ ನಡೆಯಲಿದ್ದು, ಅ.15ರಂದು ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸ್ವರ್ಣಮಯ ತ್ರಿನೇತ್ರ ಹಾಗೂ ಶ್ರೀ ಮಹಾಕಾಳಿ ಅಮ್ಮನವರಿಗೆ ಸ್ವರ್ಣಮಯ ಮಲ್ಲಿಗೆ ಹಾರ ಸಮರ್ಪಣೆ ಹಾಗೂ ಗಣಪತಿ ಹೋಮ, ಶ್ರೀ ರುದ್ರಯಾಗ ಹಾಗೂ ಚಂಡಿಕಾ ಹೋಮ ನಡೆಯಲಿದೆ.
ಅ.15ರಂದು ಆದಿತ್ಯವಾರ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸ್ವರ್ಣಮಯ ತ್ರಿನೇತ್ರ ಸಮರ್ಪಣೆ ಹಾಗೂ ಮಹಾಕಾಳಿ ಅಮ್ಮನವರಿಗೆ ಸ್ವರ್ಣಮಯ ಮಲ್ಲಿಗೆ ಹಾರ ಸಮರ್ಪಣೆ ನಡೆಯಲಿದ್ದು, ಈ ಸಂದರ್ಭ ಗಣಪತಿ ಹೋಮ, ಶ್ರೀ ರುದ್ರಯಾಗ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಪ್ರಸಾದ ವಿತರಣೆ ನಡೆಯಲಿದೆ.
ಅ.15ರಿಂದ ಅ.25ರವರೆಗೆ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ ಹಾಗೂ ವಿಶೇಷವಾಗಿ ನವದುರ್ಗಾ ಕಲ್ಪೋಕ್ತವಿಧಿ ಪೂಜೆಯು 9 ದಿನಗಳಲ್ಲಿ ನಡೆಯಲಿದೆ. ಅ.15ರಂದು ಬೆಳಗ್ಗೆ 7 ಗಂಟೆಗೆ ತೆನೆ ತರುವುದು, ಸಂಜೆ 7ಕ್ಕೆ ದೇವಾಲಯದ ಬಾಗಿಲು ತೆರೆದು ಕಲ್ಪೋಕ್ತವಿಧಿ ಪೂಜಾರಂಭಗೊಳ್ಳಲಿದೆ. ಈ ಸಂದರ್ಭ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆದು ರಾತ್ರಿ 8.30ಕ್ಕೆ ನವದುರ್ಗಾ ಕಲ್ಪೋಕ್ತವಿಧಿ ಪೂಜೆಯ ಮಹಾಮಂಗಳಾರತಿ ನಡೆದು, 9 ಗಂಟೆಗೆ ಅನ್ನ ಪ್ರಸಾದ ವಿತರಣೆಯಾಗಲಿದೆ. ಅ.24ರಂದು ಮಧ್ಯಾಹ್ನ 1ಕ್ಕೆ ಹೊಸ ಅಕ್ಕಿ ಊಟ ನಡೆಯಲಿದೆ.
ಕಲ್ಪೋಕ್ತವಿಧಿ ಪೂಜೆಗಳಾದ ದುರ್ಗಾ ಪೂಜೆಯು ಅ.15ರಂದು ನಡೆಯಲಿದ್ದು, ಅ.16ರಂದು ಅರ್ಯಾಪೂಜೆ, ಅ.17ರಂದು ಭಗವತೀ ಪೂಜೆ, ಅ.18ರಂದು ಕುಮಾರೀ ಪೂಜೆ, ಅ.19ರಂದು ಅಂಬಿಕಾ ಪೂಜೆ, ಅ.20ರಂದು ಮಹಿಷಮರ್ದಿನೀ ಪೂಜೆ, ಅ.21ರಂದು ಚಂಡಿಕಾ ಪೂಜೆ, ಅ.22ರಂದು ಸರಸ್ವತೀ ಪೂಜೆ, ಅ.23ರಂದು ವಾಗೀಶ್ವರೀ ಪೂಜೆ ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.