ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ – ಅ.26ರಂದು ಪೊಲೀಸ್ ಜನ ಸಂಪರ್ಕ ಸಭೆಗೆ ನಿರ್ಧಾರ

0

ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯಿತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಇವರ ಅಧ್ಯಕ್ಷತೆಯಲ್ಲಿ ಅ.10ರಂದು ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮೊಯಿದು ಕುಂಞ ಕಳೆದ ಸಾಮಾನ್ಯ  ಸಭೆಯಲ್ಲಿ ಪೊಲೀಸ್ ಜನ ಸಂಪರ್ಕ ಸಭೆ ನಡೆಸುವ  ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಪಂಚಾಯಿತಿ ನಿರ್ಣಯಕ್ಕೆ ಬೆಲೆ ಇಲ್ಲವೇ. ಗ್ರಾಮದಲ್ಲಿ ಗಾಂಜಾ ಸೇವನೆ ಮುಂತಾದ ಪ್ರಕರಣಗಳು ಜಾಸ್ತಿ ಆಗಿದೆ. ಗ್ರಾಮದ ಜನರಿಗೆ ಬೀಟ್ ಪೊಲೀಸರ ಪರಿಚಯವೇ ಇಲ್ಲ ಎಂದು ಹೇಳಿ ಕೂಡಲೇ ಜನ ಸಂಪರ್ಕ ಸಭೆಯನ್ನೂ ನಿಗದಿ ಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಕಾಶ್ ರೈ ಕೆಲವು ವಿದ್ಯಾರ್ಥಿಗಳಲ್ಲಿಯೂ ಕೂಡ ಮಾದಕ ದ್ರವ್ಯಗಳ ಸೇವನೆ ಆಗುತ್ತಿದೆ ಎಂದು ಹೇಳಿದರು. ಪೊಲೀಸ್ ಜನಸಂಪರ್ಕ ಸಭೆ ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಎಸ್. ಡಿ ಎಂ.ಸಿ ಸದಸ್ಯರುಗಳು ಭಾಗವಹಿಸುವಂತೆ, ಗ್ರಾಮಸ್ಥರೂ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ವಿನೋದ್ ಕುಮಾರ್ ರೈ ಹೇಳಿದರು. ನಾವು ಜನ ಸಂಪರ್ಕ ಸಭೆ ನಡೆಸುವ ದಿನಾಂಕವನ್ನು ದಿನ ನಿಗದಿಪಡಿಸುವ ಎಂದು ಉಪಾಧ್ಯಕ್ಷ  ಮಹೇಶ್ ಕೆ ಹೇಳಿದರು. ಮೇಲಾಧಿಕಾರಿಗಳ ಸಹಿತ ಸಂಪ್ಯ ಪೊಲೀಸ್ ಠಾಣೆ ಅಧಿಕಾರಿಗಳು ಭಾಗವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ನಂತರ ಚರ್ಚೆ ನಡೆದು ಅ.26 ರಂದು ಪೊಲೀಸ್ ಜನ ಸಂಪರ್ಕ ಸಭೆ ನಡೆಸುವುದಾಗಿ ನಿರ್ಣಯಿಸಲಾಯಿತು.

ಇರ್ದೆ ಗ್ರಾಮದ ಜೆಜೆಎಂ ಯೋಜನೆಯನ್ನು ಪಂಚಾಯತ್ ಗೆ ಹಸ್ತಾಂತರ ಮಾಡುವ ಬಗ್ಗೆ  ಪಿಡಿಒ ಮತ್ತು ಜೆಜೆಎಂ ಉಸ್ತುವಾರಿಗಳು ಮಾಹಿತಿ ನೀಡಿದರು. ಕಾಮಗಾರಿಗಳ ಬಗ್ಗೆ ಪಿಡಿಒರವರು ಇರ್ದೆ ಗ್ರಾಮದ ಪಂಚಾಯತ್ ಸದಸ್ಯರ ಬಗ್ಗೆ ವಿವರ ಕೇಳಿದರು. ನೀವು ಒಪ್ಪಿದರೆ ಹಸ್ತಾಂತರ ಪಡೆದುಕೊಳ್ಳುವುದಾಗಿ ಹೇಳಿದರು.

ಇದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಏನು ಹೇಳ್ತಾರೆ ಅಂತ ಗೊತ್ತಾಗದೆ ಇರುವಾಗ ಸದಸ್ಯೆ ಲಲಿತ  ಮಾತನಾಡಿ ಎಂದು  ಹೇಳಿದರು. ಕೊನೆಗೆ ಜೆಜೆಎಂ ಯೋಜನೆ ಕಾಮಗಾರಿ ಪಂಚಾಯತ್ ಗೆ ಹಸ್ತಾಂತರ ನಡೆಯಿತು. ಪೇರಲ್ತಡ್ಕ ಎಂಬಲ್ಲಿ ಅಕ್ರಮ ನೀರು ತೆಗೆದರೆ ಪಂಚಾಯತ್ ನಿಂದ ದಂಡ ವಿಧಿಸಲು ಪಂಚಾಯತ್ ನಿರ್ಧರಿಸಲಾಯಿತು.

ನ.20ರಂದು ಗ್ರಾಮ ಸಭೆ, ನ.14, 15ರಂದು ವಾರ್ಡ್ ಸಭೆ ನಡೆಸುವುದಾಗಿ ನಿರ್ಣಯಿಸಲಾಯಿತು. ಇಲಾಖೆಯ ಸುತ್ತೋಲೆ ಮತ್ತು ಸಾರ್ವಜನಿಕ ಅರ್ಜಿಗಳನ್ನು ಪರಿಶೀಲಿಸಲಾಯಿತು. ಉಪಾಧ್ಯಕ್ಷ ಮಹೇಶ್ ಕೆ, ಸದಸ್ಯರಾದ ನವೀನ್ ರೈ, ಗಂಗಾಧರ ಗೌಡ, ಪ್ರಕಾಶ್ ರೈ, ಗೋಪಾಲ, ಚಂದ್ರಶೇಖರ ರೈ, ಮಹಾಲಿಂಗ ನಾಯ್ಕ, ಮೊಯಿದು ಕುಂಞ, ವಿನೋದ್ ಕುಮಾರ್ ರೈ, ಸುಮಲತಾ, ಲಲಿತ,ರಮ್ಯ.ಕೆ, ಉಮಾವತಿ, ಪವಿತ್ರ.ಡಿ, ಪಾರ್ವತಿ.ಎಂ, ಲಲಿತ ಚಿದಾನಂದ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸೌಮ್ಯ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್,ಕವಿತಾ, ಸವಿತಾ, ಚಂದ್ರಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here