ಪುತ್ತೂರು: ಏಕಕಾಲದಲ್ಲಿ ಮೊಬೈಲ್​ಗಳಿಗೆ ಬಂದ ಅಲರ್ಟ್​ ಮೆಸೇಜ್ – ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ವಶ ಪಡೆದ ಶಿಕ್ಷಕರು !

0

ಪುತ್ತೂರು:ಭಾರತ ದೂರ ಸಂಪರ್ಕ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ದೇಶದ ಜನತೆಗೆ ಮೊಬೈಲ್‌ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ಬಗ್ಗೆ ಇಂದು ಪ್ರಾಯೋಗಿಕ ಪರೀಕ್ಷೆ ನಡೆಸಿದೆ.ಇಂದು ಬೆಳಿಗ್ಗೆ 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್‌ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ.ಆದರೆ ಈ ಧ್ವನಿ ಮತ್ತು ಕಂಪನಕ್ಕೆ ಅನೇಕ ಕಾಲೇಜು ವಿದ್ಯಾರ್ಥಿಗಳ ಮೊಬೈಲ್‌ ಫೋನ್‌ ಗೆ ಕುತ್ತು ಬಂದಿದೆ.

ಹೌದು ತರಗತಿಯೊಳಗೆ ಮೊಬೈಲ್ ಗೆ ನಿರ್ಬಂಧ ಹೇರಲಾಗಿತ್ತಾದರೂ ಇವತ್ತು ಮೊಳಗಿದ ಬೀಪ್ ಸೌಂಡ್ ಗೆ ಪುತ್ತೂರಿನ ಕಾಲೇಜೊಂದರಲ್ಲಿ ತರಗತಿಯೊಳಗೆ ಹಲವು ವಿದ್ಯಾರ್ಥಿಗಳ ಮೊಬೈಲ್ ಪೋನ್ ಶಿಕ್ಷಕರ ವಶಕ್ಕೆ ಸೇರಿದೆ.


ಈಗ ಬದಲಾಗುತ್ತಿರುವ ವಾತಾರಣದಿಂದ ಕೆಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪ, ಯುದ್ಧ,ಇನ್ನೀತರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಹೊಸ ಟೆಕ್ನಾಲಜಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಚಯಿಸಲು ಸಿದ್ಧವಾದಂತೆ ಎಮರ್ಜೆನ್ಸಿ ಸಂದರ್ಭದಲ್ಲಿ ಜನರ ಮೊಬೈಲ್‌ಗಳಿಗೆ ತುರ್ತು ಸಂದೇಶ ಬರುವಂತೆ ಮಾಡುವ ಹೊಸ ಟೆಕ್ನಾಲಜಿಯ ಪರೀಕ್ಷೆ ನಡೆಯುತ್ತಿದೆ. ಇದರ ಭಾಗವಾಗಿ ಇಂದು ಹಲವರ ಮೊಬೈಲ್‌ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್​ ಸೌಂಡ್ ಕೇಳಲಿದೆ ಎಂದು ಹೇಳಲಾಗಿತ್ತು. ಅದರಂತೆ ಬೆಳಗ್ಗೆ ಎಲ್ಲರ ಮೊಬೈಲ್ ನಲ್ಲಿ ಎರ್ಮಜನ್ಸಿ ಬೀಪ್ ಸೌಂಡ್ ಬಂದಿದೆ.‌


ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ಇದಕ್ಕಾಗಿ ನೀವು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇರುವುದಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಈ ಮೆಸೇಜ್​​ ಭೂಕಂಪ, ಸುನಾಮಿ, ಪ್ರವಾಹ, ಯುದ್ಧಗಳ ಸಂದರ್ಭದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಜನರಿಗೆ ಎಚ್ಚರಿಕೆ ನೀಡಲು ಸಹಕಾರಿಯಾಗಲಿದೆ. ಅದೇ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತೆಗೆದುಕೊಳ್ಳಲು ಇದು ಸಹಕಾರಿಯಾಗಲಿದೆ. ಆದರೆ ವೊಬೈಲ್ ಸೈಲೆಂಟ್ ಮಾಡಿ ತರಗತಿಯೊಳಗೆ ಹೋದ ವಿದ್ಯಾರ್ಥಿಗಳೆಲ್ಲರ ಮೊಬೈಲ್ ಏಕಕಾಲಕ್ಕೆ ಧ್ವನಿ ಮತ್ತು ಕಂಪನವಾಗಿದೆ. ಈ ಶಬ್ದ ಶಿಕ್ಷರನ್ನು ಎಚ್ಚರಿಸಿದೆ. ಶಿಕ್ಷಕರು ಮೊಬೈಲ್ ಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here