ಪುತ್ತೂರು: ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗಳ ಎಲ್ಲಾ ಠಾಣೆಗಳಲ್ಲಿ ’ತೆರೆದ ಮನೆ’ ಎಂಬ ಕಾರ್ಯಕ್ರಮ ಆರಂಭಗೊಂಡಿದ್ದು, ಪೊಲೀಸರ ಕುರಿತು ಜನಸಾಮಾನ್ಯರಲ್ಲಿ ಅಡಗಿರುವ ಭಯವನ್ನು ಮುಕ್ತಗೊಳಿಸುವ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.12ರಂದು ತೆಂಕಿಲ ಕನ್ನಡ ಮಾದ್ಯಮ ಶಾಲೆಯ 75 ವಿದ್ಯಾರ್ಥಿಗಳಿಗೆ ಠಾಣೆ ಭೇಟಿ ಕಾರ್ಯಕ್ರಮ ನಡೆಯಿತು.
ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಮ್.ಎನ್.ರಾವ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಕಾನೂನು ಮಾಹಿತಿ ನೀಡಿದರು. ಮಕ್ಕಳ ಹಕ್ಕುಗಳ ಬಗ್ಗೆ, ಮಕ್ಕಳ ಸಹಾಯವಾಣಿ, 112 ಸಹಾಯವಾಣಿಯ ಬಗ್ಗೆ ಹಾಗು ಸಂಚಾರ ನಿಯಮ, ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭ ಎಸ್.ಐ ಭವಾನಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.