ರಾಜ್ಯಮಟ್ಟದ ದಸರಾ ವೈಟ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಫಿಲೋಮಿನಾ ಕಾಲೇಜಿಗೆ 5 ಚಿನ್ನ, 1 ಬೆಳ್ಳಿ ಪದಕ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಅ. 12 ಮತ್ತು13ರಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ವೈಟ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕ ಮತ್ತು 1 ಬೆಳ್ಳಿಯ ಪದಕ ಪಡೆದಿದ್ದಾರೆ.

ಪುರುಷರ 61 ಕೆ.ಜಿ. ವಿಭಾಗದಲ್ಲಿ ಮುನಾಫ್ ಬೆಳ್ಳಿ ಪದಕ ಗಳಿಸಿದ್ದು 73 ಕೆ.ಜಿ. ವಿಭಾಗದಲ್ಲಿ ಭುವನ್ ರಾಮ್, 81 ಕೆ.ಜಿ. ವಿಭಾಗದಲ್ಲಿ ಶಬರೀಶ ಬಿ. ರೈ, 89 ಕೆ.ಜಿ. ವಿಭಾಗದಲ್ಲಿ ಅಭಿರಾಮಚಂದ್ರ ಅಡಿಗುಂಡಿ, ಮಹಿಳೆಯರ 45 ಕೆ.ಜಿ. ವಿಭಾಗದಲ್ಲಿ ಸ್ಪಂದನ ಕೆ. ಮತ್ತು 71 ಕೆ.ಜಿ. ವಿಭಾಗದಲ್ಲಿ ಬ್ಯೂಲಾ ಪಿ.ಟಿ. ಅವರು ಚಿನ್ನದ ಪದಕ ಪಡೆದಿದ್ದಾರೆ.

ಸಂತಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ ಹಾಗೂ ಪ್ರಮುಖ ತರಬೇತುದಾರರಾದ ನಿವೃತ್ತ ಯೋಧ ಪುಷ್ಪರಾಜ್ ಗೌಡ ಬಾರ್ತಿಕುಮೇರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here