ಪುತ್ತೂರು: ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ 10 ಮಂದಿ ರೈತ ಉದ್ಯಮಿಗಳು ಕೃಷಿ ಪ್ರವಾಸೋದ್ಯಮದ ಸಲುವಾಗಿ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಅ.12 ರಂದು ಭೇಟಿ ನೀಡಿದರು. ಮಂಗಳೂರು, ಮಡಿಕೇರಿ, ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆ ಪ್ರವಾಸ ಮಾಡಿ ಅಲ್ಲಿನ ಜೀವನ ಕಲೆ, ಸಾಂಸ್ಕೃತಿಕತೆ, ಕೃಷಿ ಪದ್ದತಿಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಈ ತಂಡದ ಸಂದರ್ಶನ ನಡೆದಿದೆ. ಸುದ್ದಿ ಕೃಷಿ ಪ್ರವಾಸೋದ್ಯಮ ಪರಿಕಲ್ಪನೆಯ ಪ್ರೇರಣೆಯಿಂದ ಈ ಅಧ್ಯಯನ ತಂಡದ ಭೇಟಿ ನಡೆದಿದೆ ಎಂದು ಇದೇ ವೇಳೆ ಕಡಮಜಲು ಸುಭಾಸ್ ರೈ ಹೇಳಿದರು. ಸಿರಿಕಡಮಜಲು ಕೃಷಿ ಕ್ಷೇತ್ರವನ್ನು ಸಮಗ್ರ ವೀಕ್ಷಣೆ ಬಳಿಕ ಕೃಷಿಯನ್ನು ಒಂದು ಉದ್ಯಮವನ್ನಾಗಿ ರೂಪುಗೊಳಿಸುವ ಬಗ್ಗೆ ಚಿಂತನ-ಮಂಥನ ನಡೆಯಿತು. ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕಡಮಜಲು ಸುಭಾಸ್ ರೈಯವರು ಸಮಗ್ರ ಕೃಷಿಯ ಬಗ್ಗೆ ಮಾಹಿತಿ ನೀಡಿ ʻವಿದ್ಯಾವಂತರು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಸಿಕೊಂಡು ಸಂತೃಪ್ತ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಬಹುದೆಂದು ಹೇಳಿದರು.
ತಂಡದಲ್ಲಿ ಗುಜರಾತಿನ ವಿವಿಧ ಜಿಲ್ಲೆಗಳ ನೀಲೇಶ್ ಚೊಕಾವಾಲ, ದೆವನೀಶ್ ಜರಿವಾಲ, ಯೋಗೀಶ್ ಪಠೇಲ್, ಫಲ್ಗುಣ ಪಠೇಲ್, ರಾಜೀವ್ ಪನ್‌ವಾಲ, ಕಿನ್ನರಿ ಪನ್‌ವಾಲ, ಶ್ರೀಶ ಫರೀಕ, ಸೋನಾಲ್ ಫರೀಕ, ಹರೀಂದ್ರ ದೇಸಾಯಿ, ಬಿನಾಲ್ ದೇಸಾಯಿ ಪಾಲ್ಗೊಂಡಿದ್ದರು. ಸಿರಿಡಕಮಜಲು ಕೃಷಿ ಕ್ಷೇತ್ರ ವೀಕ್ಷಣೆ ಬಳಿಕ ತಂಡ ಮೆಚ್ಚುಗೆಯನ್ನು ದಾಖಲಿಸಿದೆ.