ಅ.15ರಿಂದ 23: ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವ

0

ಅ.22- ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಾಮೂಹಿಕ ಆಯುಧ ಪೂಜೆ

ʻಗದಾಯುದ್ದ ʼ ಯಕ್ಷಗಾನ, ಹೆಜ್ಜೆಗೆಜ್ಜೆ, ಅಕ್ಷಯ ತುಳುನಾಡು ವೈಭವ, ಭಕ್ತಿರಸಮಂಜರಿ

ಪುತ್ತೂರು: ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ಅ.15ರಿಂದ 23ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಅ.15ರಂದು ರಾತ್ರಿ ನವರಾತ್ರಿ ಉತ್ಸವ ಉದ್ಘಾಟನೆಯನ್ನು ಸುಮತಿ ಪಾಟಾಳಿ ಕೋಡಿಯಡ್ಕರವರನು ನೆರವೇರಿಸಲಿದ್ದಾರೆ. ಬಳಿಕ ಭಜನಾ ಸೇವೆ ನಡೆದು, ರಾತ್ರಿ ಕೆದಂಬಾಡಿ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
ಅ.16ರಂದು ರಾತ್ರಿ ಭಜನೆ ಬಳಿಕ ಬೃಂದಾವನ ನಾಟ್ಯ ಶಾಲೆ ಸನ್ಯಾಸಿಗುಡ್ಡೆ ಇಲ್ಲಿನ ವಿದುಷಿ ರಶ್ಮಿ ದಿಲೀಪ್‌ ರೈ ಮತ್ತು ಶಿಷ್ಯ ವೃಂದದವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಅ.17ರಂದು ರಾತ್ರಿ ಭಜನೆ, ಬಳಿಕ ಸಂಪ್ರೀತಿ ಮೆಲೋಡಿಸ್‌ ಪುತ್ತೂರು ರವರಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಅ. 18ರಂದು ರಾತ್ರಿ ಭಜನೆ ಬಳಿಕ ಸಂತ ಫಿಲೋಮಿನಾ ಕಾಲೇಜು ಯಕ್ಷ ಕಲಾಕೇಂದ್ರ ಮತ್ತು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಆಶ್ರಯದಲ್ಲಿ ʻಗದಾಯುದ್ದʼ ಕನ್ನಡ ಪೌರಾಣಿಕ ಯಕ್ಷಗಾನ ನಡೆಯಲಿದೆ.
ಅ. 19ರಂದು ರಾತ್ರಿ ಭಜನೆ, ಬಳಿಕ ನೃತ್ಯ ಮಾಡಾವು ವಿದ್ಯಾರ್ಥಿನಿಯರಿಂದ ʻಹೆಜ್ಜೆ ಗೆಜ್ಜೆʼ ನಡೆಯಲಿದೆ.
ಅ. 20 ರಂದು ರಾತ್ರಿ ಭಜನೆ, ಅಕ್ಷಯ ಕಾಲೇಜು ಸಂಪ್ಯ ಇದರ ವಿದ್ಯಾರ್ಥಿಗಳಿಂದ ʻಅಕ್ಷಯ ತುಳುನಾಡು ವೈಭವʼ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಅ. 21 ರಂದು ಭಜನೆ, ಚೈತ್ರಾ ಲಕ್ಷ್ಮೀಶ ಕಡಮಜಲು ತಂಡದವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
ಅ. 22 ರಂದು ಸಂಜೆ ವೇ.ಮೂ. ಕೃಷ್ಣಕುಮಾರ ಉಪಾಧ್ಯಾಯ ಪಟ್ಲಮೂಲೆಯವರ ನೇತೃತ್ವದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ, ಭಜನೆ, ಸಾಮೂಹಿಕ ಆಯುಧ ಪೂಜೆ ನೆರವೇರಲಿದೆ.
ಅ. 23ರಂದು ಭಜನೆ ನಡೆದು ಬಳಿಕ ನವರಾತ್ರಿ ಉತ್ಸವ ಸಮಾರೋಪ ನೆರವೇರಲಿದೆ. ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ. ಸುಳ್ಯ ರೋಟರಿ ಪ್ರೌಢಶಾಲೆಯ ಶಿಕ್ಷಕಿ ನಳಿನಾಕ್ಷಿ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಕೆದಂಬಾಡಿ ಗ್ರಾ.ಪಂ. ಘನತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಯುವರಂಗ ಕೆದಂಬಾಡಿ ಸದಸ್ಯರಿಂದ ಮತ್ತು ಊರವರಿಂದ ಕಾರ್ಯಕ್ರಮ ವೈವಿಧ್ಯ ಜರಗಲಿದೆ. ಪ್ರತಿದಿನ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here