ಈಶ ವಿದ್ಯಾಲಯದಲ್ಲಿ ಶೈನ್-2023 ಉದ್ಘಾಟನೆ

0

ಪುತ್ತೂರು: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ ಭಾರತ್ ಸೇವಕ್ ಸಮಾಜ್‌ನ ಆಶ್ರಯದಲ್ಲಿ ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರಿನಲ್ಲಿ ಮೊಂಟೆಸ್ಸರಿ ಶಿಕ್ಷಕಿ ತರಬೇತಿ ವಿದ್ಯಾರ್ಥಿನಿಯರ ನಾಲ್ಕು ದಿನಗಳ ಶೈನ್-2023 ತರಬೇತಿ ಶಿಬಿರವು ಸಂಸ್ಥೆಯಲ್ಲಿ ನಡೆಯಿತು.

ಈಶ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಶಾರದಾಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿ, ತರಬೇತಿಗಳು ಮನುಷ್ಯನನ್ನು ಪರಿಪೂರ್ಣರನ್ನಾಗಿಸುತ್ತವೆ. ತರಬೇತಿಯ ಅವಕಾಶಗಳು ಸಿಕ್ಕಾಗ ಅವುಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮುಂದಕ್ಕೆ ವೃತ್ತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಲು ಸಾಧ್ಯ. ಹಾಗಾಗಿ ಇಂಥಹ ತರಬೇತಿಯಲ್ಲಿನ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮನ್ನು ತಾವು ಪರಿಪೂರ್ಣರನ್ನಾಗಿಸಿಕೊಳ್ಳಿ ಎಂದು ಶಿಬಿರಕ್ಕೆ ಶುಭಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲ .ಎಂ.ಗೋಪಾಲಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೊಂಟೆಸ್ಸರಿ ಶಿಕ್ಷಕಿ ತರಬೇತಿ ವಿದ್ಯಾರ್ಥಿನಿಯರಾದ ರಾಗಿಣಿ, ಅನನ್ಯಾ, ಸಂಚನಾ, ಧನ್ಯಶ್ರೀ ಪ್ರಾರ್ಥಿಸಿದರು. ಶಿಲ್ಪಶ್ರೀ ಸ್ವಾಗತಿಸಿ, ರಝಿಯಾ ವಂದಿಸಿದರು. ಶ್ರೀಜಾ ಜೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here