ಶ್ರೀ ದುರ್ಗಾ ಗುಡಿಯಲ್ಲಿ ವಿಶೇಷ ಪೂಜಾ ಸೇವೆಗಳು
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಶ್ರೀ ದುರ್ಗಾಗುಡಿಯಲ್ಲಿ ಅ.15 ರಿಂದ ನವರಾತ್ರಿ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಆರಂಭಗೊಂಡಿದೆ.
ಪ್ರತಿ ದಿನ ಅರ್ಚಕರು ಶ್ರೀ ದುರ್ಗಾ ಬಿಂಬವನ್ನು ಒಂದೊಂದು ಬಣ್ಣದ ಸೀರೆಯಿಂದ ಶೃಂಗಾರಗೊಳಿಸುತ್ತಾರೆ. ರಾತ್ರಿ ಗಂಟೆ 7.30ರ ಪೂಜೆಯ ಬಳಿಕ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಯಿತು.