ಡಾ. ಶಿವರಾಮ ಕಾರಂತರು ಆರಂಭಿಸಿದ 70 ನೇ ವರ್ಷದ ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ

0

ದೇವರುಗಳ ಗುಣಗಳನ್ನು ಮೈಗೂಡಿಸಿದಾಗ ಜೀವನ‌ ಸಾರ್ಥಕ – ಕೇಶವಪ್ರಸಾದ್ ಮುಳಿಯ

ಪುತ್ತೂರು: ಡಾ|ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬ 70ನೇ ವರ್ಷದ ಕಾರ್ಯಕ್ರಮ ಅ.15 ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.


ದೇವರುಗಳ ಗುಣಗಳನ್ನು ಮೈಗೂಡಿಸಿದಾಗ ಜೀವನ‌ ಸಾರ್ಥಕ :
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ದಸರಾ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿವಿಧ ದೇವರನ್ನು ಪೂಜಿಸುವ ನಾವು ಆ ದೇವರುಗಳ ಗುಣಗಳನ್ನು ನಾವು‌ ಮೈಗೂಡಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. ನಮ್ಮ ಸನಾತನಾ ಧರ್ಮ ನಮಗೆ ಹಲವು ವಿಚಾರ ಹೇಳಿಕೊಟ್ಟಿದೆ. ಅದನ್ನು ನಾವು ಮೈಗೂಡಿಸಬೇಕು ಎಂದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಶುಭಹಾರೈಸಿದರು.‌ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್ ಅತಿಥಿಗಳನ್ನು ಗೌರವಿಸಿದರು. ಕೋಶಾಧಿಕಾರಿ ರಮೇಶ್ ಬಾಬು ಪಿ ಲೆಕ್ಕಪತ್ರ ಮಂಡಿಸಿದರು.ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಜ್ಞಾ, ಲಾಸ್ಯ, ಶಾರ್ವರಿ ಪ್ರಾರ್ಥಿಸಿದರು.


ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್ ಕೆ ಜಗನ್ನಿವಾಸ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಎಮ್ ಟಿ ಜಯರಾಮ ಭಟ್ ವಂದಿಸಿದರು. ಡಾ.ಗೀತಾ ಕುಮಾರಿ ಕೆ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಕಾರಂತರ ಭಾವಚಿತ್ರಕ್ಕೆ ಹಾರಾರ್ಪಣೆಯ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಮತ್ತು ನಳಿನಿ ವಾಗ್ಲೆ ಅವರನ್ನು ಗೌರವಿಸಲಾಯಿತು.

ಹಿಂದು ಸಮಾಜದ ಕಲೆಗಳಿಗೆ ಅವಕಾಶ:
ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್ ಕೆ ಜಗನ್ನಿವಾಸ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಶಿವರಾಮ ಕಾರಂತರು ಆರಂಭಿಸಿದ ದಸರಾ ನಾಡಹಬ್ಬದಲ್ಲಿ ಸರಳವಾಗಿ ಜನಮೆಚ್ಚುವ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ. ಆದರೆ 70 ವರ್ಷದ ನಡಿಗೆ ಸರಳವಾಗಿರಲಿಲ್ಲ. ಆರಂಭದಲ್ಲಿ ಎಲಿಮೆಂಟರಿ ಶಾಲೆಯ ಬಳಿಕ ಮಹಾಲಿಂಗೇಶ್ವರ ದೇವಸ್ಥಾನ, ಸ್ವಲ್ಪ ಸಮಯ ಹೊರಗೆ ಮತ್ತೆ ನಾನು ಮೊಕ್ತೇಸರನಾದಗ ಪುನಃ ದೇವಳದಲ್ಲೇ ಆರಂಭ ಮಾಡಿಸಿದೆ. ಇಲ್ಲಿ ಹೊಸ ಹೊಸ ವಿಚಾರವನ್ನು ಸಾರ್ವಜನಿಕರಿಗೆ ಕೊಡುವ ಕಾರ್ಯಕ್ರಮ,
ಹಿಂದು ಸಮಾಜದ ಕಲೆ, ಸಂಸ್ಕೃತಿಗಳಿಗೆ ಅವಕಾಶ ನೀಡಲಾಗುತ್ತಿದೆ. ಕಾರ್ಯಕ್ರಮದ ಕುರಿತು ಅನಿಸಿಕೆ ಇದ್ದರೆ ಬರಹ ಮೂಲಕ ಸಮಿತಿಗೆ ನೀಡಿ ಎಂದರು.

LEAVE A REPLY

Please enter your comment!
Please enter your name here