*ಪೇಟೆ ಪಟ್ಟಣಗಳಲ್ಲಿರುವ ಸಂಸ್ಥೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಸಾರಾ ಬೆಳೆದಿದೆ: ಕಾವು ಹೇಮನಾಥ ಶೆಟ್ಟಿ
*ಗ್ರಾಹಕರೊಳಗಿನ ಮಾಲಕರ ಉತ್ತಮ ಬಾಂಧವ್ಯವೇ ಸಂಸ್ಥೆಯ ಯಶಸ್ಸಿನ ಗುಟ್ಟು: ಅರವಿಂದ ಬೋಳಾರ್
ವಿಟ್ಲ: ಪೇಟೆ ಪಟ್ಟಣಗಳಲ್ಲಿರುವ ಸಂಸ್ಥೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಈ ಸಂಸ್ಥೆ ಬೆಳೆದು ನಿಂತಿದೆ. ಗ್ರಾಹಕರಿಗೆ ಸಂತೃಪ್ತ ಸೇವೆ ನೀಡಿರುವುದೆ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ. ದೊಡ್ಡ ಪೇಟೆ ಪಟ್ಟಣಗಳಲ್ಲಿ ಇರುವ ದರಕ್ಕಿಂತ ಕಡಿಮೆ ದರದಲ್ಲಿ ಸಾಮಾಗ್ರಿಗಳನ್ನು ಗ್ರಾಹಕರಿಗೆ ನೀಡುತ್ತಿರುವ ನಿಟ್ಟಿನಲ್ಲಿ ಇದೊಂದು ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಲು ಸಾಧ್ಯವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ಮನೆಬಳಕೆಯ ವಸ್ತುಗಳು ಸಿಗುವ ಸಂಸ್ಥೆ ಇದಾಗಿದ್ದು, ಕ್ವಾಲಿಟಿ, ದರದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿರವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಮಾಣಿ – ಮೈಸೂರು ಹೆದ್ದಾರಿಯ ಕೊಡಾಜೆ ಗಣೇಶ ನಗರದ ನಿಧಾ ಆರ್ಕೆಡ್ ನಲ್ಲಿ ವ್ಯವಹರಿಸುತ್ತಿರುವ ಸಾರಾ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ ಮತ್ತು ಕಿಚನ್ ವೇರ್ ನ ವರ್ಷಾಚರಣೆಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಹಿಸಲಸಾದ್ಯವಾದ ಸಾಮಾಗ್ರಿಗಳು ಇಲ್ಲಿದೆ. ವ್ಯಾಪಾರದ ಗುಟ್ಟು ಅರಿತಿರುವವರಿಗೆ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಮಾಲಕರ ಕಲ್ಪನೆ ಸಾಕಾರವಾಗಲಿದೆ. ವಿವಿದೆಡೆ ಸಂಸ್ಥೆಯ ಶಾಖೆಗಳು ತೆರೆಯುವಂತಾಗಲಿ. ವಸ್ತುವಿನ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ.ಸಂಸ್ಥೆಯ ಮಾಲಕರು ಲಾಭದಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುತ್ತಿರುವುದು ಉತ್ತಮ ವಿಚಾರ ಎಂದರು.
ಚಲನಚಿತ್ರ ನಟ ಅರವಿಂದ್ ಬೋಳಾರ್ ರವರು ಮಾತನಾಡಿ ಸಂಸ್ಥೆಯ ಒಂದು ವರುಷದ ಸಂಭ್ರಮಾಚರಣೆಗೆ ಇಷ್ಟೊಂದು ಜನ ಸೇರಿದ್ದಾರೆ ಎಂದಾದರೆ ತುಂಬಾ ಕುಶಿಯಾಗುತ್ತಿದೆ. ಗ್ರಾಹಕರೊಳಗಿನ ಮಾಲಕರ ಉತ್ತಮ ಬಾಂಧವ್ಯವೇ ಸಂಸ್ಥೆಯ ಯಶಸ್ಸಿನ ಗುಟ್ಟು. ಎಲ್ಲಿ ಪ್ರೀತಿ ಭಾವ ಇರುತ್ತದೋ ಅಲ್ಲಿ ಯಶಸ್ಸು ತನ್ನಿಂದಾನೆ ಬರುತ್ತದೆ. ಒಳ್ಳೆಯ ಕೆಲಸದಿಂದ ಒಳಿತಾಗಲು ಸಾಧ್ಯ. ಸಂಸ್ಥೆಯಲ್ಲಿ ಬಂದ ಲಾಭದಲ್ಲಿ ಒಂದಂಶವನ್ನು ಸಮಾಜದ ಏಳಿಗೆಗೆ ನೀಡುತ್ತುರುವ ಮಾಲಕರ ನಡೆ ಅಭಿನಂದನೀಯ. ಈ ಒಂದು ಸಣ್ಣ ಗ್ರಾಮಾಂತರ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಇನ್ನೊಬ್ಬರ ನೋವಿಗೆ ಸ್ಪಂಧಿಸುವ ಮನಸ್ಸು ನಮ್ಮದಾಗಬೇಕು. ಅಭಿಮಾನ ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಸಮಯ ಪ್ರಜ್ಞೆ ನಮ್ಮೊಳಗಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೈನುಲ್ ಉಲಾಮ ಮಾಣಿ ಉಸ್ತಾದ್, ಮಿತ್ತಬೈಲ್ ಇರ್ಷಾದ್ ದಾರಿಮಿ ಉಸ್ತಾದ್, ಕೃಷಿಕರಾದ ಪ್ರಪುಲ್ಲ ರೈ ವಿಟಲಕೋಡಿ, ಪುತ್ತೂರು ಲಯನ್ಸ್ ಕ್ಲಬ್ ವಲಯಾಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ , ಮಾಣಿ ಲಯನ್ಸ್ ಕ್ಲಬ್ ನ ಗಂಗಾಧರ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಮಾಣಿ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಮಾಣಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ವಿನ್ಸೆಂಟ್ ಲಸ್ರದೊ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತಾ ಡಿ. ಪೂಜಾರಿ, ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಡಾ. ಶ್ರಿನಾಥ್ ಆಳ್ವ ಮಾಣಿ, ಕಡೇಶ್ವಾಲಯ ಯಮುನಾ ಬೋರ್ವೆಲ್ಸ್ & ಅರ್ಥ್ ಮೂವರ್ಸ್ ನ ಮಾಲಕರಾದ ದಯಾನಂದ ಶೆಟ್ಟಿ, ಮಾಣಿ ಕ್ವಾಲಿಟಿ ಗ್ರೂಪ್ಸ್ ನ ಮಾಲಕರಾದ ನಾಗರಾಜ ಶೆಟ್ಟಿ ಸಾಗು ಮಾಣಿ, ಮಾಣಿ ಸುರಾಭಿ ಹೊಟೆಲ್ ಮಾಲಕರಾದ ನವಿತ್ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೂಸಪ್ಪ ಪೂಜಾರಿ, ರಾಜ್ ಕಮಲ್ ಕನ್ಸ್ ಸ್ಟ್ರಕ್ಷನ್ ನ ಮಾಲಕರಾದ ಉಮ್ಮಾರ್ ಹಾಜಿ ರಾಜ್ ಕಮಲ್, ಇಬ್ರಾಹಿಂ ರಾಜ್ ಕಮಲ್, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಭಟ್, ಪ್ರವೀಣ್ ಚಂದ್ರ ಶೆಟ್ಟಿ ಕಲ್ಲಾಜೆ, ಸುಲ್ತಾನ್ ಗ್ರೂಪ್ಸ್ ನ ಮಾಲಕರಾದ ರಫೀಕ್ ಹಾಜಿ ಸುಲ್ತಾನ್, ಡಾ. ಮನೋಹರ ಗಡಿಯಾರ, ಎನ್.ಎಸ್.ಯು.ಐ.ರಾಜ್ಯ ಉಪಾಧ್ಯಕ್ಷ ಫಾರುಕ್ ಬಯಾಬೆ, ಹಜಾಜ್ ಗ್ರೂಪ್ಸ್ ನ ಮಾಲಕರಾದ ಅಬೂಬಕ್ಕರ್ ಹಾಜಿ ಗೋಳ್ತಮಜಲು, ಅನಂತಾಡಿ ಗ್ರಾಮ ಪಂಚಾಯತ್ ಮಾಜಿ ಕಾರ್ಯದರ್ಶಿ ಮೋನಪ್ಪ ಗೌಡ, ಪುತ್ತೂರು ಜಿ.ಎಲ್. ಒನ್ ಮಾಲ್ ನ ದೋಸಾ ಪಾಯಿಂಟ್ ಮಾಲಕರಾದ ನಿರಂಜನ್ ರೈ, ಕರಾವಳಿ ಗ್ರೂಪ್ಸ್ ಸಲೀಂ ಕೆ.ಬಿ, ತಾ.ಪಂ.ಮಾಜಿ ಸದಸ್ಯ ಆದಂ.ಕುಂಞಿ ಹಾಜಿ ಬಯಾಬೆ, ಕೊಡಾಜೆ ನೌಫಲ್ ಟಿಂಬರ್ ಮಾಲಕ ಯೂಸುಪ್ ಹಾಜಿ ಕೊಡಾಜೆ, ಮಿತ್ತೂರು ಶುಭೋದಯ ಫ್ಯೂಯೆಲ್ಸ್ ನ ಮಾಲಕರಾದ ಗೋಪಾಲಕೃಷ್ಣ ಭಟ್ ಬೈಪದವು, ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂ ಮಾಲಕರಾದ ಫಾರುಕ್ ಹಾಜಿ ಸುಲ್ತಾನ್, ನೇರಳಕಟ್ಟೆ ಜನಪ್ರೀಯ ಗಾರ್ಡ್ ನ್ ನ ವಿ.ಕೆ. ಇಸ್ಮಾಯಿಲ್ ಹಾಜಿ ಕಂಬಳಬೆಟ್ಟು, ಸನೂಫ್ ಎಂಟರ್ ಪ್ರೈಸಸ್ ಮಾಲಕ ಬಾತೀಷ್ ಬಾಯಬೆ, ಗಣೇಶನಗರ ಸದ್ಗುರು ಹೋಟೆಲ್ ನ ಮಾಲಕರಾದ ಅನಂತಪ್ರಭು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಮೆಲ್ವಿನ್ ಮಾರ್ಟಿಸ್ ಮೊದಲಾದವರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಯಾಸಿನ್ ಸ್ವಾಗತಿಸಿ, ಮಾಲಕರ ತಂದೆ ಹಮೀದ್ ರವರು ವಂದಿಸಿದರು. ದರ್ಬೆ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ವರ್ಷಾಚರಣೆ ಸಂಭ್ರಮ ಪ್ರಯುಕ್ತ ಮಹಾಲೋನ್ ಮೇಳ – ಪ್ರತೀ ಖರೀದಿ ವೇಳೆ ಗ್ರಾಹಕರಿಗೆ ವಿಶೇಷ ರಿಯಾಯಿತಿ
ಸಂಸ್ಥೆಯ ಆರಂಭದ ದಿನಗಳಿಂದಲೂ ಈ ಭಾಗದ ಜನರು ನಮಗೆ ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ
ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್, ಕಿಚನ್ ವೇರ್ ಗಳ ಬೃಹತ್ ಸಂಗ್ರಹ ನಮ್ಮ ಸಂಸ್ಥೆಯಲ್ಲಿದೆ. ವಸ್ತುಗಳ ಗುಣಮಟ್ಟವನ್ನು ಕಾಯ್ದುಕೊಂಡು ಅತೀ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಪ್ರಯತ್ನ ನಮ್ಮದಾಗಿದೆ. ಸಂಸ್ಥೆಯಲ್ಲಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಶಿನ್, ಎ.ಸಿ, ಹಾಗೂ ಎಲ್ಲಾ ತರದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೋಫಾ, ಬೆಡ್ ರೂಂ ಸೆಟ್, ಡೈನಿಂಗ್ ಟೇಬಲ್, ಹಾಗೂ ಎಲ್ಲಾತರಹದ ಫರ್ನೀಚರ್ಸ್ ಗಳು ಹಾಗೂ ಎಲ್ಲಾ ಶ್ರೇಣಿಯ ಕಿಚನ್ ವೇರ್ ಗಳು ಸಂಸ್ಥೆಯಲ್ಲಿ ಲಭ್ಯವಿದೆ. ಸಂಸ್ಥೆಯ ವರ್ಷಾಚರಣೆಯ ಪ್ರಯುಕ್ತ ಸಂಸ್ಥೆಯಲ್ಲಿ ಪ್ರತಿಯೊಂದೂ ವಸ್ತುಗಳ ಖರೀದಿ ವೇಳೆ ಗ್ತಾಹಕರಿಗೆ ವಿಶೇಷ ರಿಯಾಯಿತಿ ದೊರೆಯಲಿದೆ ಮಾತ್ರವಲ್ಲದೆ, 0% ಬಡ್ಡಿ ದರದಲ್ಲಿ ಇಎಂಐ ಮೂಲಕ ವಸ್ತುಗಳನ್ನು ಕೊಳ್ಳುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ಸಂಸ್ಥೆಯ ವರ್ಷಾಚರಣೆಯ ಪ್ರಯುಕ್ತ ಮಹಾಲೋನ್ ಮೇಳವನ್ನು ಆಯೋಜನೆ ಮಾಡಲಾಗಿದೆ. ವರ್ಷಾಚರಣೆಯ ಸಂಭ್ರಮಾಚರಣೆ ಕೊಡುಗೆ ಅ.24ರ ವರೆಗೆ ಮುಂದುವರೆಯಲಿದೆ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈವರೆಗೆ ಗ್ರಾಹಕರು ನೀಡಿದ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇವೆ.
ಯಾಸಿನ್ ,ಮಾಲಕರು
ಸಾರಾ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್, ಕಿಚನ್ ವೇರ್