ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಗ್ರಾಮಾಂತರ ಉಪವಿಭಾಗ ಕುಂಬ್ರ ಕಚೇರಿಯಲ್ಲಿ ಅ.20ರಂದು ಬೆಳಿಗ್ಗೆ 11ರಿಂದ ನಡೆಯಲಿದೆ. ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಗ್ರಾಹಕರು ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಖುದ್ದಾಗಿ ಮತ್ತು ದೂರವಾಣಿ ಮೂಲಕ ದೂರುಗಳನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.