ಪುತ್ತೂರು: ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಹೃದಯಘಾತದಿಂದ ನಿಧನ

0

ಪುತ್ತೂರು:ನೆಲ್ಲಿಕಟ್ಟೆ ನಿವಾಸಿ ನಗರಸಭಾ ಸದಸ್ಯ ಶಕ್ತಿಸಿನ್ಹಾ ಅವರು ಅ.17 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ನೆಲ್ಲಿಕಟ್ಟೆ ಮನೆಯಲ್ಲಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಬೆಳಿಗ್ಗೆ ಅವರನ್ನು ಅವರ ಮಗಳು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅದಾಗಲೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಿಳಿದು ಬಂದಿದೆ. ಮೃತರು ಇಬ್ಬರು ಪುತ್ರಿಯರು ಮತ್ತು ಅಳಿಯನನ್ನು ಅಗಲಿದ್ದಾರೆ.

ನಾಳೆ(ಅ.18) ಅಂತ್ಯಸಂಸ್ಕಾರ
ಶಕ್ತಿಸಿನ್ಹಾ ಅವರ ಮೃತದೇಹವನ್ನು ನಾಳೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಆಪ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here