ಖೋಖೋ: ಹಳೆನೇರಂಕಿ ಶಾಲೆಯ ಲಿಖಿತ್ ರಾಜ್ಯಮಟ್ಟಕ್ಕೆ ಆಯ್ಕೆ

0

ರಾಮಕುಂಜ: 14ರ ವಯೋಮಾನದ ಪ್ರಾಥಮಿಕ ವಿಭಾಗದ ರಾಜ್ಯಮಟ್ಟದ ಖೋ ಖೋ ಪಂದ್ಯಾಟಕ್ಕೆ ಹಳೆನೇರಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲಿಖಿತ್ ಆಯ್ಕೆಯಾಗಿದ್ದಾರೆ.


ಲಿಖಿತ್ ರಾಜ್ಯಮಟ್ಟದ ಖೋ ಖೋ ಪಂದ್ಯಾಟದಲ್ಲಿ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದರು. ಈತ ಹಳೆನೇರಂಕಿ ಗ್ರಾಮದ ಪರಕ್ಕಾಲು ಹೊಸವಕ್ಲು ಅಶೋಕ ಮತ್ತು ಭಾರತಿಯವರ ಪುತ್ರ. ಲಿಖಿತ್‌ಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಬಿ., ಖೋ ಖೋ ತರಬೇತಿದಾರ ಬಿ.ಎಂ.ಮಾಧವ ಗೌಡ ಮಂಜಲ್ಪಡ್ಪು ಇವರು ತರಬೇತಿ ನೀಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಪ್ರೋತ್ಸಾಹಿಸಿದ್ದಾರೆ.

LEAVE A REPLY

Please enter your comment!
Please enter your name here