ಶಿಷ್ಟರ ರಕ್ಷಿಸಿ, ದುಷ್ಟರ ಶಿಕ್ಷಿಸಿ ಒಳ್ಳೆಯ ವ್ಯಕ್ತಿಯಾನ್ನಾಗಿ ಮಾಡುವುದೇ ನವರಾತ್ರಿ ವಿಶೇಷತೆ –ಗಿರಿಶಂಕರ ಸುಲಾಯ
ಕೆಯ್ಯೂರು: ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರಿನಲ್ಲಿ ನವರಾತ್ರಿ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವು ಅ.18ರಂದು ದೇವಳದ ವಠಾರದ ಶ್ರೀ ದುರ್ಗಾ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾಜಿ ಮೊಕ್ತೇಸರು ಜಗನ್ನಿವಾಸ ರಾವ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಕ್ಷೇತ್ರದ ಧಾರ್ಮಿಕ ಕಾರ್ಯಗಳಲ್ಲಿ ನಿಶ್ವಾಸ ಸೇವೆಯೆ ಭಗವಂತನ ಸೇವೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲು ದೊರಕುವ ವೇದಿಕೆಯ ಸದ್ಬಳಕೆ ಅತ್ಯಂತ ನಿರ್ಣಯಕ. ನವರಾತ್ರಿ ಸಮಸ್ತ ಜನತೆ ಶುಭವನ್ನು ತರಲಿ ಎಂದು ಶುಭ ಹಾರೈಸಿದರು. ಧಾರ್ಮಿಕ ಉಪನ್ಯಾಸಕರಾಗಿ ಸವಣೂರು ಧಾರ್ಮಿಕ ಮುಖಂಡ ಗಿರಿಶಂಕರ ಸುಲಾಯ ಮಾತನಾಡಿ, ಶಿಷ್ಟರ ರಕ್ಷಣೆ ಮಾಡಿ, ದುಷ್ಟರನ್ನು ಶಿಕ್ಷಿಸುವ ಮೂಲಕ ಒಳ್ಳೆಯ ವ್ಯಕ್ತಿಯಾನ್ನಾಗಿ ರೂಪು ಗೊಳ್ಳುವುದೇ ನವರಾತ್ರಿಯ ವಿಶೇಷವಾಗಿದೆ. ಮನುಷ್ಯನಲ್ಲಿರುವ ಅಸೂಯೆ, ರಾಕ್ಷಸ ಪ್ರವೃತ್ತಿಯನ್ನು ದೂರ ಮಾಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಈ ಒಂಬತ್ತು ದಿನಗಳ ಹಬ್ಬ ನಮಗೆಲ್ಲರಿಗೂ ಸಹಕಾರಿಯಾಗಿದೆ ಎಂದು ಹೇಳಿ ಪುರಾಣದಲ್ಲಿಯೂ ದಸರಾ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಗೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಗೌರವ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅದ್ಯಕ್ಷ ದೇವಣ್ಣ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆದಂಬಾಡಿ ವಲಯ ಮೇಲ್ವಿಚಾರಕಿ ಶುಭಾವತಿ, ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಪ್ರಗತಿಪರ ಕೃಷಿಕ ರಾಮಕೃಷ್ಣ ಭಟ್ ಮೇರ್ಲ, ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಬು ಪಾಟಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಣೇಶ ಭಟ್ ಕೈತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಈಶ್ವರಿ ಜೆ ರೈ ಸಂತೋಷ್ ನಗರ, ಚರಣ್ ಸಣಂಗಳ, ಜೀವನ್, ರಾಮಣ್ಣ ಗೌಡ ಮಾಡಾವು ಸಹಕರಿಸಿದರು. ರಕ್ಷಿತ್ ಪ್ರಾರ್ಥಿಸಿ, ಚೇತನ್ ದೇರ್ಲ ಸ್ವಾಗತಿಸಿ, ವಂದಿಸಿ, ಪ್ರಸಾದಿನಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ರಂಗ ಪೂಜೆ ಮತ್ತು ಹರಕೆ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ನೃತ್ಯ ವೈಭವ
ನವರಾತ್ರಿ ಉತ್ಸವದ ಅಂಗವಾಗಿ ರಾತ್ರಿ ನೃತ್ಯ ಸಂಯೋಜಕಿ ವಿದುಷಿ ಸಂಧ್ಯಾ ಗಣೇಶ್ ಇವರಿಂದ ನೃತ್ಯಾಂಜಲಿ ಪುತ್ತೂರು ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.