ಪುತ್ತೂರು: ರಿಯಲ್ ಎಸ್ಟೇಟ್ ಆಂಡ್ ಪ್ರಾಪರ್ಟಿ ಡಾಕ್ಯುಮೆಂಟೇಶನ್ ಸರ್ವಿಸ್(ಆಸ್ತಿ ದಸ್ತಾವೇಜು ಸೇವೆ) ಉದ್ಯಮದ ‘ಪ್ರೊಪ್ ಹಂಟ್ ರಿಯಾಲ್ಟೀಸ್’ ಸಂಸ್ಥೆಯು ಅ.20 ರಂದು ಕೋರ್ಟ್ ರಸ್ತೆಯ ಯೂನಿಯನ್ ಕ್ಲಬ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಂಸ್ಥೆಯು ಉತ್ತರೋತ್ತರ ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಎನ್.ಕೃಷ್ಣ ನಾಕ್‌ರವರ ಮಾವ ಕೃಷ್ಣ ನಾಕ್ ವಿಟ್ಲ, ಪತ್ನಿ ರಮ್ಯಕೃಷ್ಣ, ಪುತ್ರಿಯರಾದ ಕು|ಕಿಂಜಲ್, ಕು|ಆರುಷಿರವರು ದೀಪ ಬೆಳಗಿಸಿ ಉದ್ಯಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನರಸಿಂಹ ಶರ್ಮ, ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅಣ್ಣಿ ಪೂಜಾರಿ ಬೆದ್ರಾಳ, ಕೃಷ್ಣ ನಾಕ್ ಸಹೋದರ ಮೋಹನ್ ನಾಕ್ ತೆಂಕಿಲ, ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಇಸಾಕ್ ಸಾಲ್ಮರ, ನವೀನ್ ರೈ ಪಂಜಳ, ಶರೀಫ್ ಪಡೀಲು, ಹಮೀದ್ ಪಡೀಲು, ಮನೋಜ್ ಪಿಳಿಕ್ಕಲ, ಅಶ್ರಫ್ ಕಲ್ಲೇಗ, ಸಂಪತ್ ಕುಮಾರ್, ಉಮಾಪ್ರಕಾಶ್ ಪಾಂಗ್ಲಾಯಿ, ವಜ್ರ ರಿಯಾಲ್ಟೀಸ್ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್, ರ‍್ಯಾಂಬೊ ಡಿ’ಸೋಜ ಸಹಿತ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಎನ್.ಕೃಷ್ಣ ನಾಕ್‌ರವರು ಸ್ವಾಗತಿಸಿ, ಅತಿಥಿಗಳಿಗೆ ಹೂಗುಚ್ಛ ನೀಡಿ ಸತ್ಕರಿಸಿದರು.
ಆನ್‌ಲೈನ್ ಮೂಲಕ ಸೌಲಭ್ಯ..
ಕರ್ನಾಟಕದಾದ್ಯಂತ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಸುಲಭವಾಗುವಂತೆ ಆನ್‌ಲೈನ್ ಮೂಲಕ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಮಂಗಳೂರಿನಲ್ಲಿ ಇದು ಈಗಾಗಲೇ ಚಾಲ್ತಿಯಲ್ಲಿದ್ದು ಪುತ್ತೂರಿನಲ್ಲಿ ಈ ಸಂಸ್ಥೆಯ ಮುಖಾಂತರ ಶೀಘ್ರದಲ್ಲಿಯೇ ಲಾಂಚ್ ಮಾಡಲಾಗುವುದು. ಆಸ್ತಿ ಖರೀದಿ ಹಾಗೂ ಮಾರಾಟ ಇವೆಲ್ಲವೂ ಕೇವಲ ಮೂರು ವಿಧಾನಗಳೊಂದಿಗೆ ಸುಲಭವಾದ ಹೆಜ್ಜೆಯೊಂದಿಗೆ ಗ್ರಾಹಕರಿಗೆ ದೊರಕಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ:9480522477, 8296246577 ನಂಬರಿಗೆ ಸಂಪರ್ಕಿಸಿ, ಗ್ರಾಹಕರು ಪ್ರೋತ್ಸಾಹಿಸಿ ಸಹಕರಿಸಬೇಕು.
-ಕು|ಕಿಂಜಲ್, ಪ್ರೊಪ್ ಹಂಟ್ ರಿಯಾಲ್ಟೀಸ್