ಪುತ್ತೂರು: ರಸ್ತೆ ಬದಿಯಲ್ಲಿ ಅನುಮತಿ ಇಲ್ಲದೆ ಕಬ್ಬಿಣದ ಕಂಬವೊಂದನ್ನು ಹಾಕಿ ಹಸಿರು ಬಣ್ಣದ ಧ್ವಜವೊಂದನ್ನು ಹಾಕಿರುವ ಬಗ್ಗೆ ಕೆಲಹೊತ್ತು ಗೊಂದಲ ಸೃಷ್ಟಿಯಾದ ಘಟನೆ ಕೆಯ್ಯೂರು ಗ್ರಾಮದ ತೆಗ್ಗುವಿನಿಂದ ಅ.20ರಂದು ವರದಿಯಾಗಿದೆ. ತೆಗ್ಗು ಸಮೀಪದ ಅಂಙತ್ತಡ್ಕ ಎಂಬಲ್ಲಿ ಓಲೆಮುಂಡೋವುಗೆ ತೆರಳುವ ರಸ್ತೆಯ ಬದಿಯಲ್ಲಿ ಹಸಿರು ಬಣ್ಣದ ಧ್ವಜವನ್ನು ಹಾಕಿದ್ದರು. ಈ ಬಗ್ಗೆ ಸ್ಥಳೀಯರು ಕೆಯ್ಯೂರು ಗ್ರಾಪಂ ಗೆ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಸಂಪ್ಯ ಠಾಣಾ ಎಸ್.ಐ ಧನಂಜಯ್ ಹಾಗೂ ಸಿಬ್ಬಂದಿಗಳು, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಭೇಟಿ ಕೊಟ್ಟಿದ್ದು ಈ ವೇಳೆಗಾಗಲೇ ಧ್ವಜವನ್ನು ತೆರವುಗೊಳಿಸಿದ್ದರು ಎಂದು ತಿಳಿದು ಬಂದಿದೆ.