ಪುಣಚ : ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ 41ನೇ ವರ್ಷದ ಶ್ರೀ ಶಾರದೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.23 ಮತ್ತು 24ರಂದು ನಡೆಯಲಿದೆ.
ಅ.23ರಂದು ಬೆಳಿಗ್ಗೆ ಧ್ವಜಾರೋಹಣ, ಶಾರದಾ ಪ್ರತಿಷ್ಠೆ , ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆರಂಭ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಾಯಂಕಾಲ ಶ್ರೀದೇವಿ ಶಿಶು ಮಂದಿರ ಮತ್ತು ದೇವಿನಗರ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ , ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9:30 ರಿಂದ ರಂಗಪೂಜೆ ಪ್ರಸಾದ ವಿತರಣೆ, 10 ರಿಂದ ಯುವವೃಂದ ದೇವಿನಗರ ಇವರ ಪ್ರಾಯೋಜಕತ್ವದಲ್ಲಿ ಡ್ಯಾಝಲ್ ಸ್ಟುಡಿಯೋ ಮುಲ್ಕಿ ಕಲಾವಿದರಿಂದ “ಝೇಂಕಾರ ನೃತ್ಯ ವೈಭವ”, ಅನ್ನಸಂತರ್ಪಣೆ ನಡೆಯಲಿದೆ.
ಅ.24ರಂದು ಬೆಳಿಗ್ಗೆ ಪೂಜಾರಂಭ, ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಪುಣಚ ಇವರಿಂದ ಯಕ್ಷಗಾನ “ಷಣ್ಮುಖ ವಿಜಯ” ಸಾಯಂಕಾಲ ಶ್ರೀ ಶಾರದ ಮಾತೆಯ ವೈಭವೊಪೇತ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.