ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ “ಅಕ್ಷರಾಭ್ಯಾಸ ಹಾಗೂ ಶಾರದಾರಾಧನೆ”

0

ಪುತ್ತೂರು: ಶ್ವೇತವಸನೆ, ಹಂಸವಾಹಿನಿ, ವಿದ್ಯೆಯ ಅಧಿದೇವತೆಯಾದ ಶಾರದಾ ಮಾತೆಯು ಪರಿಶುದ್ಧತೆಯ ಹಾಗೂ ಜ್ಞಾನದ ಸಂಕೇತವಾಗಿದ್ದಾಳೆ. ಶಾರದಾ ದೇವಿಯ ಆರಾಧನೆಯು ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶರನ್ನವರಾತ್ರಿಯ ಕೊನೆಯ ದಿನವಾದ ಅ.24ನೇ ವಿಜಯದಶಮಿಯಂದು “ಅಕ್ಷರಾಭ್ಯಾಸ ಹಾಗೂ ಶಾರದಾ ಪೂಜಾ” ಕಾರ್ಯಕ್ರಮದೊಂದಿಗೆ ಜರುಗಿತು.

ಈ ಸಂದರ್ಭದಲ್ಲಿ ಅಕ್ಷರಾಭ್ಯಾಸ, ವಾಹನ ಪೂಜೆಯಂತಹ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ವೇ|ಮೂ| ಹರೀಶ ಶರ್ಮಾರವರು ನೆರವೇರಿಸಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಭರತ್ ಪೈ ಮತ್ತು ಸದಸ್ಯೆ ಶಂಕರಿ ಶರ್ಮ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಸಿಂಧೂ.ವಿ. ಜಿ, ಉಪಪ್ರಾಂಶುಪಾಲೆ ಹೇಮಾವತಿ ಎಮ್.ಎಸ್ ಹಾಗೂ ಪೋಷಕರ ಉಪಸ್ಥಿತಿಯೊಂದಿಗೆ, ಬೋಧಕ-ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಸುಶ್ರಾವ್ಯವಾದ ಭಜನೆಯು ಪೂಜಾ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ನೀಡುವಲ್ಲಿ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here