ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ ಅ. 15 ರಂದು ಮೊದಲ್ಗೊಂಡು 24 ರಂದು ಸಂಪನ್ನಗೊಂಡಿತು. .ಅ. 15 ರಂದು ಬೆಳಗ್ಗೆ ಗಣಪತಿ ಹವನ ತೆನೆ ಕಟ್ಟುವ ಮೂಲಕ ಆರಂಭಗೊಂಡ ನವರಾತ್ರಿಯಲ್ಲಿ ದೇಯಿ ಬೈದೆತಿಗೆ 9 ದಿವಸಗಳಲ್ಲಿಯೂ ವಿಶೇಷ ಅಲಂಕಾರ ಪೂಜೆ ನಡೆಯಿತು.ಪ್ರತಿ ದಿನ ಮಧ್ಯಾಹ್ನ 12.30 ಕ್ಕೆ ಪುಷ್ಪಲಂಕಾರ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.
ವಿಶೇಷ ಸೇವೆಗೆ ಅವಕಾಶ
ಭಕ್ತಾಧಿಗಳಿಗೆ ವಿಶೇಷ ಸೇವೆಗಳಿಗೆ ಅವಕಾಶ ಮಾಡಲಾಗಿದ್ದು ದೇಯಿ ಬೈದೆತಿಗೆ ಪುಷ್ಪಲಂಕಾರ ಮತ್ತು ಅನ್ನದಾನ ಸೇವೆ ಹಾಗೂ ನವರಾತ್ರಿ ಪೂಜಾ ಸೇವೆ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಅ. 24 ವಿಜಯ ದಶಮಿಯ ಪರ್ವ ದಿವಸದೊಂದು ಸರಸ್ವತಿ ಪೂಜೆ ಹಾಗೂ ಪೂರ್ವಾಹ್ನ ಗಂ 8 ರಿಂದ ಮಧ್ಯಾಹ್ನ ದವರೆಗೆ ಅಕ್ಷರಾಭ್ಯಾಸ ನಡೆಯಿತು.
ಭಜನಾ ಸಂಕೀರ್ತನೆ:-
ಸುಮಾರು 30 ವಿವಿಧ ಭಜನಾ ತಂಡಗಳಿಂದ ಶ್ರೀ ಕ್ಷೇತ್ರದಲ್ಲಿ ನಿರಂತರ ಭಜನಾ ಸಂಕೀರ್ತನೆ ನಡೆಯಿತು.
ಈ ಸಂದರ್ಭದಲ್ಲಿ ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮೂರ್ತೆದಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹರಿಶ್ಚಂದ್ರ ಕಟ್ಪಾಡಿ, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್ ,ಉಪಾಧ್ಯಕ್ಷ ಸುರೇಶ್ ಪೂಜಾರಿ, ಭಾರತ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಸದಸ್ಯ ನಿತ್ಯಾನಂದ ಕೋಟಿಯನ್ ದಯಾನಂದ ಪೂಜಾರಿ ಕಲ್ವ, ದುಬೈ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಅಮೀನ್, ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ರವಿ ಪೂಜಾರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್,ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಡಾ ರಾಜಾರಾಮ್, ಶ್ರೀ ಕ್ಷೇತ್ರ ಗೆಜ್ಜೇಗಿರಿ ಮೇಳದ ಸಂಚಾಲಕ ನವೀನ್ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಹರೀಶ್ ಸಾಲಿಯಾನ್ ಬಜಗೋಳಿ, ಎಸ್ ಆರ್ ಮಸಾಲೆ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಶೈಲೇಂದ್ರ ಸುವರ್ಣ, ಶ್ರೀ ರಾಜೇಂದ್ರ ಉಚ್ಚಿಲ, ಕಾನೂನು ಸಲಹೆಗಾರ ನವನೀತ ಹಿಂಗಾಣಿ, ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ, ಆಂತರಿಕ ಲೆಕ್ಕ ಪರಿಶೋಧಕ ಶೇಖರ ಬಂಗೇರ, ಅಭಿವೃದ್ಧಿ ಸಮಿತಿಯ ಜಯರಾಮ್ ಬಂಗೇರ, ನಾರಾಯಣ ಮಚ್ಚಿನ, ನಿತೇಶ್ ವೇಣೂರು, ನಿತ್ಯಾನಂದ ನಾವರ, ಜೈ ವಿಕ್ರಮ ಕಲ್ಲಾಪು, ಶ್ರೀಕುಮಾರ್ ಇರುವೈಲು, ಮುಖ್ಯ ಅರ್ಚಕ ಶಿವಾನಂದ ಶಾಂತಿ,ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಜೆ ಉಪಸ್ಥಿತರಿದ್ದರು.