ಸವಣೂರು ಪೆರಿಯಡ್ಕದಲ್ಲಿ ಶ್ರೀ ಆದಿಶಕ್ತಿ ಭಜನಾ ಮಂಡಳಿ, ಉತ್ಸವ ಸಮಿತಿ ಆಶ್ರಯದಲ್ಲಿ ಮುಕ್ತ ಹಗ್ಗಜಗ್ಗಾಟ

0

ಸಾಮಾಜಿಕ ಜವಬ್ದಾರಿಯ ಜೊತೆಗೆ ಧರ್ಮವನ್ನು ಉಳಿಸೋಣ- ಅರುಣ್‌ಕುಮಾರ್ ಪುತ್ತಿಲ
ಕ್ರೀಡೆಯಿಂದ ಬದುಕು ಸ್ಪೂರ್ತಿ- ಭಾಗೀರಥಿ ಮುರುಳ್ಯ

ಪುತ್ತೂರು: ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಉತ್ಸವ ಸಮಿತಿ ಆಶ್ರಯದಲ್ಲಿ 520 ಕೆ.ಜಿಯ 7 ಜನರ ಪುರುಷರ ಮುಕ್ತ ಸಿಂಗಲ್ ಗ್ರಿಪ್ ಹಾಗೂ 7 ಜನ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಅ. 24 ರಂದು ಸವಣೂರು ಪೆರಿಯಡ್ಕ ಬಸ್ ತಂಗುದಾಣದ ಬಳಿ ಜರಗಿತು.


ಸಾಮಾಜಿಕ ಜವಬ್ದಾರಿಯ ಜೊತಿಗೆ ಧರ್ಮವನ್ನು ಉಳಿಸೋಣ- ಅರುಣ್‌ಕುಮಾರ್ ಪುತ್ತಿಲ
ಕಾರ‍್ಯಕ್ರಮವನ್ನು ಉದ್ಘಾಟಿಸಿದ ಹಿಂದು ಸಂಘಟನೆಯ ಮುಖಂಡ ಅರುಣ್‌ಕುಮಾರ್ ಪುತ್ತಿಲರವರು ಮಾತನಾಡಿ ಸಾಮಾಜಿಕ ಜವಾಬ್ದಾರಿ ಜೊತೆಗೆ ನಾವು ಹಿಂದು ಧರ್ಮವನ್ನು ಉಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು, ಭಜನೆಯ ಜೊತೆಗೆ ಕ್ರೀಡಾ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿರುವ ಆದಿಶಕ್ತಿ ಭಜನಾ ಮಂಡಳಿಯ ಎಲ್ಲಾ ಯುವಕರ ಶ್ರಮವನ್ನು ಅಭಿನಂದಿಸುವುದಾಗಿ ಹೇಳಿ, ಪ್ರಸ್ತುತ ಕಾಲಘಟ್ಟದಲ್ಲಿ ಹಿಂದು ಸಮಾಜಕ್ಕೆ ಕೆಲವೊಂದು ಸಂಘಟನೆಗಳಿಂದ ಆಪತ್ತು ಎದುರಾಗುತ್ತಿದ್ದು, ಇದನ್ನು ದಿಟ್ಟವಾಗಿ ಎದುರಿಸಲು ಹಿಂದು ಸಮಾಜ ಶಕ್ತವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉದ್ಯಮಿ ರಾಜರಾಮ್ ಭಟ್ ಉಪಸ್ಥಿತರಿದ್ದರು.

ಕ್ರೀಡೆಯಿಂದ ಬದುಕು ಸ್ಪೂರ್ತಿ- ಭಾಗೀರಥಿ ಮುರುಳ್ಯ
ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಆದಿಶಕ್ತಿ ಭಜನಾ ಮಂಡಳಿಯವರು ಚಿಕ್ಕ ಜಾಗದಲ್ಲಿ ಅದಕ್ಕೆ ಹೊಂದಿಕೊಳ್ಳುವ ಕ್ರೀಡೆಯಾದ ಹಗ್ಗಜಗ್ಗಾಟವನ್ನು ಆಯೋಜನೆ ಮಾಡಿ ಯಶಸ್ಸು ಪಡೆದಿದ್ದಾರೆ. ಇಲ್ಲಿನ ಯುವಕರ ಶಕ್ತಿ ನಿರಂತರವಾಗಿ ಸಮಾಜಕ್ಕೆ ದೊರೆಯಲಿ. ಕ್ರೀಡೆ ಎಂಬುದು ಬದುಕನ್ನು ರೂಪಿಸುವುದರ ಜೊತೆಗೆ ಮನಸಿಗೆ ಮನೋರಂಜನೆಯನ್ನು ನೀಡುತ್ತದೆ ಎಂದು ಹೇಳಿದರು.

ಯಶಸ್ಸು ಸಾಧಿಸಿದೆ- ದಿನೇಶ್ ಮೆದು
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಅದಿಶಕ್ತಿ ಭಜನಾ ಮಂಡಳಿಯ ಯುವಕರ ಏಕತೆಯ ಸಂಕೇತವಾಗಿ ಇಲ್ಲಿ ಅದ್ದೂರಿಯಿಂದ ಕೂಡಿದ ಹಗ್ಗಜಗ್ಗಾಟ ಪಂದ್ಯಾಟ ಆಯೋಜನೆಗೊಂಡಿದೆ. ಹತ್ತು ಮನಸುಗಳನ್ನು ಒಂದೇ ದಿಕ್ಕಿನಡೆಗೆ ಯೋಚಿಸುವಂತೆ ಮಾಡಿರುವ ಇಲ್ಲಿನ ಯುವಕರ ಶ್ರಮ ಯಶಸ್ಸು ಸಾಧಿಸಿದೆ ಎಂದು ಹೇಳಿದರು.

ಧರ್ಮಜಾಗೃತಿಯ ಮನಸು- ರಾಕೇಶ್ ರೈ
ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ಧರ್ಮಜಾಗೃತಿಯ ಮನಸು ಉಳ್ಳ ಇಲ್ಲಿನ ಯುವಕರು ಒಂದಾಗಿ ಕ್ರೀಡಾಕೂಟವನ್ನು ಸಂಘಟಿಸಿದ್ದಾರೆ. ಯುವ ಶಕ್ತಿ ಒಂದಾದರೆ ಉತ್ತಮ ಕಾರ‍್ಯದ ಮೂಲಕ ಸಮಾಜವನ್ನು ಸಂಘಟಿಸಬಹುದು ಎಂಬದುಕ್ಕೆ ಆದಿಶಕ್ತಿ ಭಜನಾ ಮಂಡಳಿಯ ಯುವಕರ ಕಾರ‍್ಯಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಯುವ ಉದ್ಯಮಿ ಚೆನ್ನಪ್ಪ ಗೌಡ ನೂಜಿಯವರಿಗೆ ಸನ್ಮಾನ
ಪುರುಷರ ವಿಭಾಗದ ಪಂದ್ಯಾಟಕ್ಕೆ ಪ್ರಥಮ ನಗದು ಬಹುಮಾನದ ಕೊಡುಗೆ ನೀಡಿದ ಕುದ್ಮಾರಿನ ಯುವ ಉದ್ಯಮಿ, ಸಾಮಾಜಿಕ ಮುಂದಾಳು ಚೆನ್ನಪ್ಪ ಗೌಡ ನೂಜಿಯವರನ್ನು ಶಾಸಕಿ ಭಾಗೀರಥಿ ಮುರುಳ್ಯರವರು ಸನ್ಮಾನಿಸಿದರು.
ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್, ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ, ಎಲೆಕ್ಟ್ರಿಕಲ್ ಗುತ್ತಿಗೆದಾರ ಜಯರಾಮ ಸವಣೂರು, ಪಿಡಬ್ಲ್ಯೂಡಿ ಗುತ್ತಿಗೆದಾರ ಪ್ರಜ್ವಲ್ ಕೆ.ಆರ್‌ರವರುಗಳು ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಆದಿಶಕ್ತಿ ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜರಾಮ್ ಪ್ರಭು ಅಶ್ವಿನಿ ಫಾರ್ಮ್ಸ್, ಅಧ್ಯಕ್ಷ ಹರೀಶ್ ಕುಕ್ಕುಜೆ, ಕಾರ‍್ಯದರ್ಶಿ ಪ್ರವೀಣ್ ಪೆರಿಯಡ್ಕ, ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಪೂವ ಉಪಸ್ಥಿತರಿದ್ದರು. ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಗಂಗಾಧರ್ ಪೆರಿಯಡ್ಕ, ಶ್ರೀಧರ್ ಇಡ್ಯಾಡಿ, ದಯಾನಂದ ಪೆರಿಯಡ್ಕ, ಕಮಾಲಾಕ್ಷ ಪೆರಿಯಡ್ಕ ಮತ್ತಿತರರು ಅತಿಥಿಗಳನ್ನು ಗೌರವಿಸಿದರು. ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ರಾಜೇಶ್ ಇಡ್ಯಾಡಿ ಕಾರ‍್ಯಕ್ರಮ ನಿರೂಪಿಸಿದರು.


ಅದ್ಭುತ ನಿರೂಪಕ
ರಾಷ್ಟ್ರಮಟ್ಟದ ನಿರೂಪಕರಾದ ದಿವಾಕರ ಉಪ್ಪಳರವರ ಅದ್ಭುತ ನಿರೂಪಣೆಯಲ್ಲಿ ಪಂದ್ಯಾಟ ನಡೆಯಿತು.

ಗೌರವರ್ಪಣೆ
ಬಹುಮಾನಗಳ ಪ್ರಾಯೋಜಕರಿಗೆ ಮತ್ತು ಕಾರ‍್ಯಕ್ರಮಕ್ಕೆ ವಿವಿಧ ಕೊಡುಗೆಗಳನ್ನು ನೀಡಿದ ಯತೀಶ್ ಪೂವ, ಜಯರಾಮ ಸವಣೂರು, ಹರಿಪ್ರಸಾದ್ ಅಂಗಡಿಮೂಲೆ, ದೀಕ್ಷಿತ್ ಪೆರುವಾಜೆ, ಶಿವರಾಮ ಗೌಡ ಮೆದು, ಪ್ರಕಾಶ್ ಪೂಜಾರಿ ಶಿಬರ, ಅಮರ್ ರೈ ದರ್ಬೆ, ಪ್ರಜ್ವಲ್ ಕೆ.ಆರ್, ಮಹೇಶ್ ಸವಣೂರು, ರೋಹಿತ್ ಕೋಟ್ಯಾನ್ ಶಿಬರ, ಹರೀಶ್ ಕುಲಾಲ್, ಗಂಗಾಧರ್ ಪೆರಿಯಡ್ಕ, ರಾಜೇಶ್ ಇಡ್ಯಾಡಿ, ಮಿಥುನ್ ಅಗರಿ, ಹರೀಶ್ ಕುಕ್ಕುಜೆ, ಪ್ರವೀಣ್ ಪೆರಿಯಡ್ಕ, ಜಗದೀಶ್ ಇಡ್ಯಾಡಿರವರುಗಳನ್ನು ಗೌರವಿಸಲಾಯಿತು.

ಫಲಿತಾಂಶ
ಪುರುಷರ ವಿಭಾಗದ ಸಿಂಗಲ್ ಗ್ರಿಪ್ ಹಗ್ಗಜಗ್ಗಾಟದಲ್ಲಿ
ಕಾರಿಂಜಾ ಫ್ರೆಂಡ್ಸ್ ಕಾರಿಂಜಾ ಪ್ರಥಮ
ಸ್ವಾಮಿ ಕೊರಗಜ್ಜ ಪಾಲಡ್ಕ ದ್ವಿತೀಯ
ಓಂ ಫ್ರೆಂಡ್ಸ್ ಬದನಾಡಿ ತೃತೀಯ
ಶ್ರೀ ದೇವಿ ಅಲಂಕಾರು ಚತುರ್ಥ

  1. ಮಹಿಳೆಯರ ವಿಭಾಗದಲ್ಲಿ
  2. ಪ್ರಥಮ -ನಾಗಬ್ರಹ್ಮ ಪ್ರೆಂಡ್ಸ್ ಕೊಡಿಯಾಲ
  3. ದ್ವಿತೀಯ-ನಾಗಶ್ರೀ ಪ್ರೆಂಡ್ಸ್ ಸುಳ್ಯ
  4. ಪ್ರದರ್ಶನ ಪಂದ್ಯಾಟದಲ್ಲಿ
  5. ಪ್ರಥಮ-ಶ್ರೀ ಆದಿಶಕ್ತಿ ಭಜನಾ ಮಂಡಳಿ(ರಿ.) ಪೆರಿಯಡ್ಕ, ಸವಣೂರು
  6. ದ್ವಿತೀಯ-ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಘಟಕ, ಸರ್ವೆ

LEAVE A REPLY

Please enter your comment!
Please enter your name here