ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಉತ್ಸವ, ಚಂಡಿಕಾ ಹೋಮ

0

ಪುತ್ತೂರು: ಕೋಡಿಂಬಾಡಿ ಮಠದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರೀರವರ ಮಾರ್ಗದರ್ಶನದಲ್ಲಿ ಶರವನ್ನವರಾತ್ರಿ ಉತ್ಸವ ಮತ್ತು ಚಂಡಿಕಾ ಹೋಮ ನಡೆಯಿತು.

ಅ.15ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಚಂಡಿಕಾ ಹೋಮ, ಮೂಡಾಯೂರು ಚಂದ್ರಶೇಖರ ರಾವ್ ಬಳಗದಿಂದ ಸ್ಯಾಕ್ಸೋಫೋನ್ ವಾದನ, ಮಂಗಳೂರು ತನುಶ್ರೀ ಬಳಗದಿಂದ ಭಕ್ತಿರಸಮಂಜರಿ, ಭಜನೆ, ಅ.16ರಂದು ಬೆಳಿಗ್ಗೆ ಭಜನೆ, ಮೈಸೂರು ಆರ್.ವಿ.ಹಿರಣ್ಣಯ್ಯ ಮತ್ತು ಮಕ್ಕಳ ಸೇವಾರ್ಥವಾಗಿ ಚಂಡಿಕಾ ಹೋಮ, ಸಂಜೆ ಭಜನೆ, 17ರಂದು ಬೆಳಿಗ್ಗೆ 11ರಿಂದ ಭಜನೆ, ಉಡುಪಿ ಕೋಲ್ಪೆ ಗೋಪಾಲಕೃಷ್ಣ ರಾವ್ ಮತ್ತು ಮಕ್ಕಳ ಸೇವಾರ್ಥವಾಗಿ ಚಂಡಿಕಾ ಹೋಮ, ಸಂಜೆ ಭಜನೆ, ಅ.18ರಂದು ಬೆಳಿಗ್ಗೆ ಮತ್ತು ಸಂಜೆ ಭಜನೆ, ಅ.19ರಂದು ಬೆಳಿಗ್ಗೆ ಮತ್ತು ಸಂಜೆ ಭಜನೆ, ಅ.20ರಂದು ಬೆಳಿಗ್ಗೆ ಭಜನೆ, ಸಂಜೆ ಪಡುಮಲೆ ಮಧುಮಿತ ಪ್ರವೀಣ್ ರಾವ್ ರವರಿಂದ ವೀಣಾ ವಾದನ, ಅ.21ರಂದು ಬೆಳಿಗ್ಗೆ ಭಜನೆ, ಸಂಜೆ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್‌ರವರ ಪುತ್ರ ಹಾಗೂ ಶಿಷ್ಯ ವಿದ್ವಾನ್ ಕೆ. ಆರ್.ವಿಶ್ವದೀಪ್ ಮೈಸೂರು ರವರಿಂದ ಭರತನಾಟ್ಯ, ಅ.22ರಂದು ಬೆಳಿಗ್ಗೆ 7ರಿಂದ ತಾಳೆಪ್ಪಾಡಿ ಲಕ್ಷ್ಮಿನಾರಾಯಣ ರಾವ್ ಮತ್ತು ಮಕ್ಕಳ ಸೇವಾರ್ಥವಾಗಿ ಚಂಡಿಕಾ ಹೋಮ, ಮಧ್ಯಾಹ್ನ ಮುಂಬಯಿ ಪ್ರಿಯಾಂಜಲಿ ರಾವ್‌ರವರಿಂದ ಭರತನಾಟ್ಯ, ಸಂಜೆ ಭಜನೆ, ಅ.23ರಂದು ಬೆಳಿಗ್ಗೆ ಭಜನೆ, ಸಂಜೆ ಭಜನೆ, ಅ.24ರಂದು ಬೆಳಿಗ್ಗೆ ಭಜನೆ, ಸಂಜೆ ಭಜನೆ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಅಣ್ಣಪ್ಪಯ್ಯ ತೆಂಕಿಲ, ಅರ್ಚಕ ಯಂ. ನಾಗೇಶ ಶರ್ಮ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here