ಪಾಣಾಜೆ: ಒಡ್ಯ ಅಶ್ವತ್ಥಕಟ್ಟೆ ಆಯುಧಪೂಜಾ ಸಮಿತಿ ವತಿಯಿಂದ ಪ್ರಥಮ ವರ್ಷದ ಆಯುಧ ಪೂಜಾ ಸಲುವಾಗಿ ವಿವಿಧ ಕಾರ್ಯಕ್ರಮಗಳು ಅ.21ರಂದು ನಡೆದವು. ಬೆಳಿಗ್ಗೆ ಗಣಪತಿ ಹವನ, ವಾಹನ ಪೂಜೆ, ಭಜನೆ ಜರಗಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಪುರೋಹಿತ ಶ್ರೀಕೃಷ್ಣ ಭಟ್ ಬಟ್ಯಮೂಲೆ ದೀಪ ಬೆಳಗಿಸಿ ಮಾತನಾಡಿ, ‘ಅಶ್ವತ್ಥ ವೃಕ್ಷದ ಅಡಿಯಲ್ಲಿ ಯುವಕರು ಒಂದಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಡ್ಯದ ಯುವಕರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದರು.
ಪ್ರಧಾನ ಅಭ್ಯಾಗತರಾಗಿ ನಿವೃತ್ತ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ಮುಖ್ಯ ಅತಿಥಿ ಪಾಣಾಜೆ ವಲಯ ಉಪವಲಯದ ಅರಣ್ಯಾಧಿಕಾರಿ ಪ್ರಕಾಶ್ ಬಿ.ಟಿ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಪ್ಪ ನಾಯ್ಕ ಮುಂಡಿತ್ತಡ್ಕ, ಮೊಯಿದು ಕುಂಞಿ ಒಡ್ಯ ಹಾಗೂ ಶಂಕರ ರೈ ಬಾಳೆಮೂಲೆ, ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಜಯರಾಜ್, ಕಾರ್ಯದರ್ಶಿ ಲೋಕೇಶ್ ಜೆ., ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಡಮಿ ಗೌರವಾಧ್ಯಕ್ಷ ಉಮೇಶ್ ರೈ ಗಿಳಿಯಾಲು ಉಪಸ್ಥಿತರಿದ್ದರು.
ಇದೇ ವೇಳೆ ಶೈಕ್ಷಣಿಕ ಸಾಧನೆಗೈದ ಪ್ರತಿಭೆಗಳಾದ ಅರ್ಪಿತಾ ಪಿ., ತನುಶ್ರೀ, ವಂದನಾ, ಅರ್ಚನಾ, ಜಸ್ಮಿ, ಧನ್ಯಶ್ರೀ ಯವರನ್ನು ಅಭಿನಂದಿಸಲಾಯಿತು. ಶಿಕ್ಷಣ ರಂಗದಲ್ಲಿನ ಸೇವೆಗಾಗಿ ಉಸ್ಮಾನ್ ಮಂಚಿ ಹಾಗೂ ಯಕ್ಷಗಾನ ಕಲಾಸೇವೆಗಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆಯವರಿಗೆ ಗೌರವ ಸನ್ಮಾನ ನಡೆಯಿತು. ಯುವಕರ ಮಾರ್ಗದರ್ಶನ ನೀಡಿದ ಪ್ರಕಾಶ್ ಎಂ. ಮರದಮೂಲೆರವರನ್ನು ಅಭಿನಂದಿಸಲಾಯಿತು. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈಭವ ಬಳಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ‘ಸಿಟಿ ಗಯ್ಸ್’ ಮಂಗಳೂರು ಇವರಿಂದ ಸಾಂಸ್ಕೃತಿಕ, ರಸಮಂಜರಿ ‘ಡ್ಯಾನ್ಸ್ ನೈಟ್ ಡ್ಯಾನ್ಸ್’ ಕಾರ್ಯಕ್ರಮ ನಡೆಯಿತು. ರಂಜಿತ್ ಪಡ್ಯಂಬೆಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಲೋಕೇಶ್ ಜೆ., ಹರ್ಷವರ್ಧನ್, ಹರಿಪ್ರಸಾದ್ ಪಡ್ಯಂಬೆಟ್ಟು, ಚರಣ್ ಕೆ., ರಮೇಶ್ ಗುಳ್ಳಮೂಲೆ, ನಾರಾಯಣ ಅಂಬಟೆಮೂಲೆ, ಜಗದೀಶ್ ಒಡ್ಯ, ಮಾಧವ ನಾಯ್ಕ ಅಜಕ್ಕಳ, ಮೋಹನ್ ಜೋಗಿಮೂಲೆ, ಗೋಪಾಲಕೃಷ್ಣ ಸುಂದರಗಿರಿಯವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮವನ್ನು ಸುದ್ದಿ ಲೈವ್ ನಲ್ಲಿ ನೇರ ಪ್ರಸಾರಗೊಳಿಸಲಾಯಿತು.