ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಪುತ್ತೂರು: ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಆವರಣದಲ್ಲಿ 25ನೇ ವರ್ಷದ ಅಶ್ವತ್ಥ ಪೂಜೆ ಹಾಗೂ ಸತ್ಯನಾರಾಯಣ ಪೂಜೆಯನ್ನು ನ.25ರಂದು ನಡೆಸುವುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯು ಅ.20ರಂದು ಕಟ್ಟೆಪೂಜೆ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಬಾರ್ಯರವರ ಅಧ್ಯಕ್ಷತೆಯಲ್ಲಿ ಕಟ್ಟೆಯ ಆವರಣದಲ್ಲಿ ನಡೆಯಿತು. ಈ ವರ್ಷ ಬೆಳ್ಳಿಹಬ್ಬದ ಅಂಗವಾಗಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗುವುದು. ಬೆಳಿಗ್ಗೆ ಗಣಹೋಮ, ಅಶ್ವತ್ಥ ಪೂಜೆ, ಸಂಜೆ 6 ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಶ್ರೀ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ಇವರಿಂದ ‘ದಾಲ ತೊಂದರೆ ಇಜ್ಜಿ’ ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ಐತಪ್ಪ ರೈ ಗಡಿಪ್ಪಿಲ, ಕಾರ್ಯದರ್ಶಿ ಸುರೇಶ್ ಪ್ರಭು ಶೆಟ್ಟಿ ಮಜಲು
ಖಜಾಂಚಿ ಗಣೇಶ್ ಶೆಟ್ಟಿ ಶಿಬರ, ಸದಸ್ಯರಾದ ಕೃಷ್ಣಪ್ಪ ಮೂಲ್ಯ ಶಿಬರ, ಚೆನ್ನಪ್ಪ ಪೂಜಾರಿ ಪಾಣಂಬು, ನವೀನ್ ರೈ ಶಿಬರ, ಕಿಶೋರ್ ಪುರುಷರಕಟ್ಟೆ, ನವೀನ್ ಪ್ರಭು ಉದಯಭಾಗ್ಯ, ಚೆನ್ನಪ್ಪ ಗೌಡ ಶಾಂತಿಗೋಡು, ಸೇಸಪ್ಪ ಪೂಜಾರಿ ಮುಕ್ವೆ, ಸುಧಾಕರ ಕುಲಾಲ್ ನಡುವಾಲ್, ವಸಂತ ರೈ ಶಿಬರ, ಉಮೇಶ್ ರೈ ಶಿಬರ, ಅರುಣ್ ರೈ ಶಿಬರ, ನೇಮಣ್ಣ ಶಿಬರ, ಶಶಿಧರ ಕುಲಾಲ್, ಜತ್ತಪ್ಪ ಟೈಲರ್ ಪುರುಷರಕಟ್ಟೆ, ದೇವಿಕಿರಣ್ ಉದಯಭಾಗ್ಯ, ಹರಿಶ್ಚಂದ್ರ ಶಿಬರ, ನಿತ್ಯಾನಂದ ಆಚಾರ್ಯ ಪುರುಷರಕಟ್ಟೆ, ರಾಜೇಶ್ ಪೂಜಾರಿ ಮುಕ್ವೆ, ಗುಣಕರ ಶೆಟ್ಟಿ ಶಿಬರ, ಪ್ರವೀಣ್ ನಡುವಾಲ್, ಕೇಶವ ಶಿಬರ ಗುತ್ತು, ಪದ್ಮರಾಜೀವ್ ಪೂಜಾರಿ, ಚಂದ್ರಶೇಖರ ಆಲಂಗ, ಕೃಷ್ಣಪ್ಪ ಪೂಜಾರಿ ಮಾಯಂಗಲ, ಕೇಶವ ಗೌಡ ಮಾಯಂಗಲ, ಮಾಧವ ಸಾಲ್ಯಾನ್ ಕೊಡಂಕಿರಿ ಮೊದಲಾದವರು ಉಪಸ್ಥಿತರಿದ್ದರು.