ಪುತ್ತೂರು:ಪುರುಷರಕಟ್ಟೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಅ.29ರಂದು ನರಿಮೊಗ್ರು ಗ್ರಾ.ಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನರಿಮೊಗರು, ಓಂ ಫ್ರೆಂಡ್ಸ್ ಮುಕ್ವೆ, ಆಟೋರಿಕ್ಷಾ ಚಾಲಕ ಮ್ಹಾಲಕ ಸಂಘ ಮುಕ್ವೆ, ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ, ಪುರುಷರಕಟ್ಟೆ ಪೂರ್ಣಾನಂದ ಭಜನಾ ಮಂದಿರ, ಶಾಂತಿಗೋಡು ವಿಕ್ರಂ ಯುವಕ ಮಂಡಲ, ನರಿಮೊಗರು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂಡಳಿ, ವನದುರ್ಗಾಂಬಿಕಾ ಭಜನ ಮಂಡಳಿ ದೇವಿನಗರ, ಸಾಂದೀಪನಿ ಗ್ರಾಮಿಣ ವಿದ್ಯಾಸಂಸ್ಥೆಗಳು ನರಿಮೊಗರು, ಸರಸ್ವತಿ ವಿದ್ಯಾ ಸಂಸ್ಥೆ ಪುರುಷರಕಟ್ಟೆ ಮತ್ತು ಎಸ್ಎಸ್ಎಫ್ ಮುಕ್ವೆ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ.
ಶಿಬಿರವನನ್ನು ಖ್ಯಾತ ವೈದ್ಯರು, ಪುತ್ತೂರು ಡಾಕ್ಟರ್ಸ್ ಫಾರಂನ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ, ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ನಾರಾಯಣ ಅಸ್ರ, ಕೆಮ್ಮಿಂಜೆ ನಾಗೇಶ್ ತಂತ್ರಿ ಹಾಗೂ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಉದ್ಘಾಟಿಸಿಲಿದ್ದಾರೆ.
ಚಿಪ್ ಕನ್ಸಲ್ಟೆಂಟ್ ಮತ್ತು ಫಿಸಿಷಿಯನ್ ಆಗಿರುವ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ, ಮಕ್ಕಳ ತಜ್ಞ ಡಾ. ಸಂದೀಪ್ ಎಚ್.ಎಸ್., ಹಿರಿಯ ತಜ್ಞ ವೈದ್ಯ ಡಾ.ಶ್ರೀಕುಮಾರ್ ಕತ್ರಿಬೈಲ್, ಫಿಸಿಷಿಯನ್ ಮತ್ತು ಮಧುಮೇಹ ತಜ್ಞೆ ಡಾ.ಅನನ್ಯಲಕ್ಷ್ಮೀ ಸಂದೀಪ್, ಎಲುಬು ಮತ್ತು ಕೀಲು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಮನೋರೋಗ ಮತ್ತು ಕೌನ್ಸಿಲಿಂಗ್ ತಜ್ಞೆ ಡಾ.ಅಕ್ಷತಾ ಸಿ.ಜೆ, ಡಾ.ಗ್ರೀಷ್ಮಾ ಕೆ.ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಡಲಿದ್ದಾರೆ. ಮಧುಮೇಹ ತಪಾಸಣೆ, ರಕ್ತದ ಒತ್ತಡ, ಇಸಿಜಿ ಮೊದಲಾದ ಚಿಕಿತ್ಸೆ ಹಾಗೂ ತಪಾಸಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಚಿಫ್ ಕನ್ಸಲ್ಟೆಂಟ್ ಹಾಗೂ ಫಿಸಿಷಿಯನ್ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ತಿಳಿಸಿದ್ದಾರೆ.