ಸುವರ್ಣ ಸಂಭ್ರಮ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪುತ್ತೂರಿನಲ್ಲಿ ಭುವನೇಶ್ವರಿಯ ಭವ್ಯ ಮೆರವಣಿಗೆ -ಪುತ್ತೂರು ಉಮೇಶ್ ನಾಯಕ್

0

ಪುತ್ತೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ಮರು ನಾಮಕರಣವಾದ ಐವತ್ತನೇ ವರ್ಷದ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಈ ಬಾರಿ ದರ್ಬೆ ವೃತ್ತದಿಂದ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಡೆಯಲಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಅವರು ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಮುಖ್ಯರಸ್ತೆಯಾಗಿ ಕೋರ್ಟ್ ರಸ್ತೆ ಮೂಲಕ ಸಾಗಿ ಪುರಭವನದಲ್ಲಿ ತಾಲೂಕು ಆಡಳಿತದಿಂದ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

ಮೆರವಣಿಗೆ ವಿಶೇಷತೆಗಳು:
ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರವನ್ನು ತೆರೆದ ಜೀಪಿನಲ್ಲಿ ಇರಿಸಿ, ಕೊಂಬು ವಾದ್ಯ, ಕೀಲು ಕುದುರೆ, ಚಂಡೆ ವಾದ್ಯ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 8 ಶ್ರೇಷ್ಠ ಸಾಹಿತಿಗಳ ಭಾವಚಿತ್ರಗಳ ಟ್ಯಾಬ್ಲೋ , ಕನ್ನಡ ಅಭಿಮಾನಿ ಗೋಪಾಲ ಆಚಾರ್ಯ ಇವರಿಂದ ಚಿಣ್ಣರ ಉಗಿಬಂಡಿ ಪ್ರದರ್ಶನ, ಪುತ್ತೂರು ನಗರದ ಎಂಟು ಶಾಲೆಯ 400 ಮಕ್ಕಳು, ಪುತ್ತೂರಿನ ಪ್ರತಿಷ್ಠಿತ 30 ಸಂಘ ಸಂಸ್ಥೆಗಳ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಮೆರವಣಿಗೆಯಲ್ಲಿ ಭಾಗಿಯಾಗುವ ಶಾಲೆಗಳ ವಿವರ :
ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಬೆಥನಿ ಪ್ರೌಢಶಾಲೆ ಪಾಂಗಳಾಯಿ, ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು, ಸರಕಾರಿ ಪ್ರೌಢಶಾಲೆ ಪುತ್ತೂರು ನಗರ, ಸಂತ ಫಿಲೋ ಮೀನಾ ಪ್ರೌಢಶಾಲೆ ದರ್ಬೆ, ಸಂತ ವಿಕ್ಟರ್ ಪ್ರೌಢಶಾಲೆ ಪುತ್ತೂರು ಸೇರಿದಂತೆ ಸುಮಾರು 30 ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಸ್ವರ್ಣ, ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ವಕೀಲರ ಸಂಘ, ಜನ್ಮ ಪೌಂಡೇಶನ್ ಪುತ್ತೂರು, ಚಿಗುರಲೆ ಸಾಹಿತ್ಯ ಬಳಗ, ಇನ್ನರ್ ವೀಲ್ ಕ್ಲಬ್, ರೆಡ್ ಕ್ರಾಸ್ ಪುತ್ತೂರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್ ಕನ್ಸಲಟಿಂಗ್ ಸಿವಿಲ್ ಇಂಜಿನಿಯಸ್, ವಿದ್ಯುತ್ ಗುತ್ತಿಗೆದಾರರ ಸಂಘ, ಕರ್ನಾಟಕ ಪತ್ರಕರ್ತರ ಸಂಘ -ಪುತ್ತೂರು ತಾಲೂಕು ಘಟಕ, ಬಿ ಎ ಎಂ ಎಸ್ ಆಟೋ ಚಾಲಕ ಮಾಲಕರ ಸಂಘ, ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ, ಕರ್ನಾಟಕ ರಿಕ್ಷಾ ಮಾಲಕ ಚಾಲಕರ ಸಂಘ, ದರ್ಬೆ ಗೂಡ್ಸ್ ವಾಹನ ಮಾಲಕ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಛಾಯಾಚಿತ್ರಗ್ರಾಹಕರ ಸಂಘ, ಮುಳಿಯ ಫೌಂಡೇಶನ್ ಪುತ್ತೂರು, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಪುತ್ತೂರು ಘಟಕ, ಭಾರತ ಸೇವಾದಳ ಪುತ್ತೂರು ಘಟಕ, ಪುತ್ತೂರು ಎಸ್ಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ‍್ಸ್ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ತಾಲೂಕು ಆಡಳಿತದ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಗುವುದು. ಮೆರವಣಿಗೆಯಲ್ಲಿ ಪುತ್ತೂರು ತಾಲೂಕಿನಲ್ಲಿರುವ ಎಲ್ಲಾ ಕನ್ನಡ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಭಾಗವಹಿಸುವಂತೆ ಮನವಿ ಮಾಡಿರುವ ಉಮೇಶ್ ನಾಯಕ್ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ (ಟ್ಯಾಬ್ಲೋ ) ಮಾಡಲು ಇಚ್ಚಿಸುವ ಸಂಘ ಸಂಸ್ಥೆಗಳಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂಬ ಹೆಸರನ್ನು ಪಡೆದು 50 ವರ್ಷ ಸಂಧ ಸುವರ್ಣ ಸಂಭ್ರಮದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಕನ್ನಡಕ್ಕೆ ಗೌರವ ನೀಡುವುದರು ಜೊತೆಗೆ ಶಾಲಾ ಕಾಲೇಜುಗಳಲ್ಲಿ ನಿರಂತರ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಉಮೇಶ್ ನಾಯಕ್ ಮನವಿ ಮಾಡಿದ್ದಾರೆ.

ಬಹಳ ವರ್ಷದ ಹಿಂದೆ ಕನ್ನಡ ರಾಜ್ಯೋತ್ಸವವನ್ನು ದರ್ಬೆ ವೃತ್ತದಿಂದ ಭುವನೇಶ್ವರಿಯ ಅಲಂಕೃತ ಭಾವಚಿತ್ರವನ್ನು ವಿವಿಧ ಸ್ಥಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ವೈಭವದಿಂದ ಆಚರಿಸಲಾಗುತ್ತಿತ್ತು. ಕಾರಣಾಂತರಗಳಿಂದ ಈ ಮೆರವಣಿಗೆಯು ನಿಂತು ಹೋಗಿದ್ದು, ಇದೀಗ ಮತ್ತೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಮತ್ತೆ ಹಳೆಯ ಭವ್ಯತೆಯನ್ನು ಕಾಣಲಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here