34ನೇ ನೆಕ್ಕಿಲಾಡಿ ಬಳ್ಳಿ ಆಯುರ್ ಗ್ರಾಮ – ಆಯುರ್ವೇದ ಆಸ್ಪತ್ರೆಯು ನಿಟ್ಟೆ ವಿ.ವಿಯೊಂದಿಗೆ ಒಡಂಬಡಿಕೆ

0

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದಲ್ಲಿರುವ ಬಳ್ಳಿ ಆಯುರ್ ಗ್ರಾಮ-ಆಯುರ್ವೇದ ಆಸ್ಪತ್ರೆಯು ನೆಟ್ಟು ಬೆಳಸಿ ಸಂರಕ್ಷಿಸುತ್ತಿರುವ ಅಳಿವಿನಂಚಿನಲ್ಲಿರುವ ಸಾವಿರಕ್ಕೂ ಅಧಿಕ ಔಷಧೀಯ ಗಿಡಮರಗಳ ಗುಣಗಳ ಕ್ಯೂಆರ್ ಕೋಡ್ ಮಾಡಲು ಹಾಗೂ ಸಂಶೋಧನೆಗೆ ಒತ್ತು ನೀಡಲು ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಕಾರ್ಯಕ್ರಮದಲ್ಲಿ ಉಪ ಕುಲಪತಿ ಪ್ರೊ. ಡಾ|ಎಂ.ಎಸ್ ಮೂಡಿತ್ತಾಯ, ರಿಜಿಸ್ಟ್ರಾರ್ ಪ್ರೊ. ಡಾ|ಹರ್ಷ ಹಾಲಹಳ್ಳಿ, ನಿರ್ದೇಶಕ ಪ್ರೊ.ಡಾ|ಅನಿರ್ಬನ್ ಚಕ್ರವರ್ತಿ (NUCSER), ಸಂಶೋಧನಾ ನಿರ್ದೇಶಕ ಪ್ರೊ. ಡಾ|ಪ್ರವೀಣ್ ಶೆಟ್ಟಿ, ಕಾನೂನು ಸಲಹೆಗಾರ ನಿತ್ಯ ಚೇತನ್, ಉಪ ನಿರ್ದೇಶಕ ಪ್ರೊ.ಡಾ|ಸ್ಮಿತಾ ಹೆಗ್ಡೆ ಉಪಸ್ಥಿತರಿದ್ದರು. ಬಳ್ಳಿ ಆಯುರ್ ಗ್ರಾಮ-ಆಯುರ್ವೇದ ಆಸ್ಪತ್ರೆಯ ಪರವಾಗಿ ಡಾ.ಸುಪ್ರೀತ್ ಲೋಬೊ ಹಾಗೂ ಡಾ.ಶೈನಿ ಪಾಯ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here