ಪುತ್ತೂರು: ಮುರ ಎಂಪಿಎಂ ವಿದ್ಯಾಲಯದಲ್ಲಿ ಕರ್ನಾಟಕ 68ನೇ ರಾಜ್ಯೋತ್ಸವವನ್ನು ನ.1ರಂದು ಆಚರಿಸಲಾಯಿತು. ಶಾಲಾ ಸಂಚಾಲಕ ನೋಟರಿ ನ್ಯಾಯವಾದಿ ಜ| ಎಂ.ಪಿ ಅಬೂಬಕ್ಕರ್ರವರು ಧ್ವಜಾರೋಹಣವನ್ನು ನಿರ್ವಹಿಸಿ ನಮ್ಮ ದೇಶದ ಇತಿಹಾಸದ ಸ್ವಾತಂತ್ರ ಸಂಗ್ರಾಮದಲ್ಲಿ ಅತೀ ಹೆಚ್ಚು ವೀರ ಪುರುಷರು, ಮಹಿಳೆಯರು,ಬದುಕು ತ್ಯಾಗ ಮಾಡಿದವರಿರುತ್ತಾರೆ. ಕರ್ನಾಟಕವೂ ಭಾಷೆ, ಕಲೆ, ಸಾಹಿತ್ಯ ಶಿಲ್ಪಕಲೆಗೆ ಹೆಸರಾಗಿದೆ. ಕರ್ನಾಟಕವೂ ಅತೀ ಹೆಚ್ಚು ನೈಸರ್ಗಿಕ ಸಂಪತ್ತು ಹಾಗೂ ರಮಣೀಯವಾದ ಸುಂದರ ನಾಡಾಗಿದೆ ಎಂದರು.
ಸಮಾರಂಭದಲ್ಲಿ ಮಹಮ್ಮದ್ ಇರ್ಷಾದ್ ಎಂ.ಪಿ ಹಾಗೂ ಸುಲೈಮಾನ್ ಮೌಲವಿ, ಫಾರುಖ್ ಕಲ್ಲೇಗ ಹಾಗೂ ಪ್ರಾಧ್ಯಾಪಕಿ ಕವನ, ಅಧ್ಯಾಪಕಿ ಯಾಸ್ಮಿನ್ ಹಾಗೂ ಪ್ರಾಧ್ಯಾಪಕಿ ಸರಸ್ವತಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವರ್ಣರಂಜಿತ ಕರ್ನಾಟಕದ ವೈಭವದ ವಿವಿಧ ವಿನೋದಾವಳಿಗಳು ಏರ್ಪಡಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಭಾರತಿ ಸ್ವಾಗತಿಸಿ, ಪ್ರಾಧ್ಯಾಪಕಿ ಪ್ರಮೀಳಾ ಡಿ ಸೋಜ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಕಿ ಪ್ರೇಮಾ ವಂದಿಸಿದರು.