ಶೈಕ್ಷಣಿಕ ಕ್ಷೇತ್ರಕ್ಕೆ ಸಂಸ್ಥೆಯ ಕೊಡುಗೆ ಅಪಾರ: ಯು.ಟಿ ಖಾದರ್ ಮೆಚ್ಚುಗೆ
ಪುತ್ತೂರು: ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ‘ನೂರ್ ಶೋ’ದಲ್ಲಿ ಭಾಗವಹಿಸಿ ಸಂಸ್ಥೆಯ ಕಾರ್ಯ ವೈಖರಿ, ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ವಹಿಸಿದ್ದರು. ಪ್ರಾಂಶುಪಾಲರಾದ ಹನೀಫ್ ಹುದವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಬಡಗನ್ನೂರು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬೂಬಕ್ಕರ್ ಮಂಗಳ, ಇಸ್ಮಾಯೀಲ್ ಹಾಜಿ, ಅಬ್ದುಲ್ ಖಾದರ್ ಬಯಂಬಾಡಿ, ಇಬ್ರಾಹಿಂ ಹಾಜಿ ಸಹಿತ ಸಂಸ್ಥೆಯ ಆಡಳಿತ ಸಮಿತಿ ಸದಸ್ಯರು, ಗಣ್ಯರು ಉಲಮಾ, ಉಮರಾ ನಾಯಕರು ಭಾಗವಹಿಸಿದ್ದರು.ಸಂಸ್ಥೆಯ ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಷದಿ ಸ್ವಾಗತಿಸಿದರು.
ಅದ್ದೂರಿ ಸ್ವಾಗತ:
ಯುಟಿ ಖಾದರ್ ಅವರು ನೂರುಲ್ ಹುದಾ ಸಂಸ್ಥೆಗೆ ಭೇಟಿ ನೀಡಿದ ವೇಳೆ ಕನ್ನಡ ರಾಜ್ಯೋತ್ಸವ ತಿರಂಗ ಹಾಕಿ ಸಂಸ್ಥೆಯ ಪ್ರತಿನಿಧಿಗಳು ಸ್ವೀಕರಿಸಿದರು. ಸುಮಾರು 365ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹೂಗುಚ್ಚ ನೀಡಿ ಮತ್ತು ವಿವಿಧ ದೇಶದ ಸಂಸ್ಕೃತಿಯೊಂದಿಗೆ ಸ್ವೀಕರಿಸಿ ಗೌರವಿಸಿದರು.