ಜಿಲ್ಲಾಮಟ್ಟದ ಆಮೆಚೂರು ಕಬಡ್ಡಿ: ರಾಮಕುಂಜ ಕ.ಮಾ.ಪ್ರೌಢಶಾಲೆಗೆ ’ರನ್ನರ್ ಅಪ್ ಪ್ರಶಸ್ತಿ ’

0

  • ರಾಮಕುಂಜ: ದ. ಕ ಜಿಲ್ಲಾ ಆಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ವತಿಯಿಂದ ವಾಮದಪದವುನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ “ರನ್ನರ್ ಅಪ್ ” ಪ್ರಶಸ್ತಿ ಪಡೆದುಕೊಂಡಿದೆ.
  • ತಂಡದ ನಾಯಕ ಕಾರ್ತಿಕ್ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ತಂಡಕ್ಕೆ ಮಾಧವ ಬಿ.ಕೆ, ಜಸ್ವಂತ್ ಹಾಗೂ ಮಂಜುನಾಥ್‌ರವರು ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here