ಪುತ್ತೂರು: ಜೀರಾ ಮಸಾಲ ಪಾನೀಯದ ಮೂಲಕ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ಬಿಂದು ಸಂಸ್ಥೆ ಪುನರ್ಪುಳಿ ಹಣ್ಣಿನ ಪಾನೀಯ ಕೋಕಂ ಡ್ರಿಂಕ್ ಮತ್ತು ಪಾಸ್ತ ಫಿಂಗರ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವೋಕಲ್ ಫಾರ್ ಲೋಕಲ್ ಎಂಬಂತೆ ಸ್ಥಳೀಯ ಸಾಂಪ್ರದಾಯಕ ಪೇಯ ಜೀರಾ ಮಸಾಲವನ್ನು ವಿಶ್ವಕ್ಕೆ ಪರಿಚಯಿಸಿದ ಬಿಂದು ಸಂಸ್ಥೆ ಒಂದು ಹೆಜ್ಜೆ ಮುಂದಿಟ್ಟು ಮತ್ತೊಮ್ಮೆ ಸಾಂಪ್ರದಾಯಿಕ ರೀತಿಯಲ್ಲಿ ಕೋಕಂ ಪಾನೀಯ ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಆಯುರ್ವೇದ ಪದ್ದತಿಗಳಲ್ಲಿ ಕೋಕಂ ಹಣ್ಣನ್ನು ಅತಿಸಾರ, ಆಮಶಂಕೆ, ಗ್ಯಾಸ್ಟ್ರಿಟಿಸ್, ಹೊಟ್ಟೆಯುರಿ, ಉರಿಯೂತ, ಭೇದಿಗಳಂತಹ ಕಾಯಿಲೆಗಳಿಗೆ ಉಪಯೋಗಿಸಲಾಗುತ್ತಿದ್ದು ಕೋಕಂ ಹಣ್ಣಿನ ರಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಪಾನೀಯ ಸಿದ್ದಪಡಿಸಲಾಗಿದೆ. ಆರಂಭಿಕ ಹಂತದಲ್ಲಿ 160 ಎಂ ಎಲ್ ಪ್ಯಾಕ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಎಸ್ ಜಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್ ತಿಳಿಸಿದ್ದಾರೆ. ಯುವ ಸಮುದಾಯ ಇಷ್ಟ ಪಡುವ ರೀತಿಯಲ್ಲಿ ಪಾಸ್ತ ಫಿಂಗರ್ಸ್ ನ್ನು ಸ್ಕೆಜ್ವಾನ್ ಸ್ವಾದದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಆರಂಭಿಕ ಕೊಡುಗೆಯಾಗಿ ಪ್ರತಿ ಪ್ಯಾಕ್ ನಲ್ಲಿ 20 ಶೇಕಡಾ ಪಾಸ್ತ ಫಿಂಗರ್ಸ್ ಹೆಚ್ಚುವರಿಯಾಗಿ ಸಿಗಲಿದೆ.