ಆನಡ್ಕ ಸ.ಹಿ.ಪ್ರಾ ಶಾಲೆಯಲ್ಲಿ ವಿಶೇಷ ಶೈಕ್ಷಣಿಕ ಕಾರ್ಯಾಗಾರ

0

ಪುತ್ತೂರು: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ನಡೆಯಿತು.ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ. ಜೀವಿತಾ ಹಾಗೂ ಪ್ರೊಫೆಸರ್ ರಜನಿ ರೈ. ಬಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪುತ್ತೂರು ನಾಗಶ್ರೀ ಐತಾಳ್, ಕೌನ್ಸಿಲರ್ ಇನ್ ಸೈಕಾಲಜಿ, ಪೋಷಕರಿಗಾಗಿ “ಹದಿಹರೆಯದ ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳು ಎಂಬ ವಿಷಯದಲ್ಲಿ ಕಾರ್ಯಗಾರವನ್ನು ನಡೆಸಿಕೊಟ್ಟರು.


ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಶಶಾಂಕ್, ಸಾತ್ವಿಕ್, ಸರೋಷ್, ಅಶ್ವಥ್, ಚೈತ್ರ, ರಾಜಶ್ರೀ, ಹರ್ಷಿತಾ ಶ್ರೀ, ಲಿತಿಕಾ, ರೂಪ ವೇದಗಣಿತದ ಮೂಲಕ ಸರಳವಾಗಿ ಲೆಕ್ಕಗಳನ್ನು ಬಿಡಿಸುವ ವಿಧಾನ, ಕಂಪ್ಯೂಟರ್ ಜ್ಞಾನ, ಕೆಲವು ರಸಾಯನ ಶಾಸ್ತ್ರದ ಪ್ರಯೋಗಗಳ ಕುರಿತಾಗಿ ತಿಳಿಸಿದರು.

ಎಸ್ ಡಿ ಎಂ ಸಿ ಯ ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯಎಂ.ದಿನೇಶ್ ಗೌಡ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶುಭಲತಾ ಉಪಸ್ಥಿತರಿದ್ದರು.ಶಿಕ್ಷಕ ಫೆಲ್ಸಿಟಾ ಡಿಕುನ್ಹಾ ಸ್ವಾಗತಿಸಿ ಮಾಲತಿ ವಂದಿಸಿ, ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಅಕ್ಷತಾ ಮತ್ತು ಸೌಮ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here