ವಿಟ್ಲ: ಜ್ಞಾನ, ತಿಳುವಳಿಕೆಗಳ ವಿದ್ಯಾರ್ಥಿಗಳ ಸ್ವ ನಿರ್ಮಿತ ಆಯ್ದ ವಸ್ತುಗಳ ಕ್ರಮಗೊಳಿಸಿದ ಪ್ರಸ್ತುತಿ ಮತ್ತು ಪ್ರದರ್ಶನ ಇದಾಗಿದೆ. ಸುಮಾರು 700 ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ತಮ್ಮ ವೈಜ್ಞಾನಿಕ, ಗಣೀತಾತ್ಮಕ, ಭಾಷಾಜ್ಞಾನ ವನ್ನು ಪ್ರದರ್ಶಿಸುತಿದ್ದಾರೆ. ಇದು ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆಗೆ ಪೂರಕವಾಗಲಿ ಎಂದು ಸಂಸ್ಥೆಯ ಅಧ್ಯಕ್ಷ ಎಲ್. ಎನ್. ಕೂಡೂರು ಹೇಳಿದರು.ಅವರು ಶಾಲೆಯಲ್ಲಿ ನಡೆದ ಶೈಕ್ಷಣಿಕ ವಸ್ತುಪ್ರದರ್ಶಣವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕ ಹಸನ್ ವಿಟ್ಲ ಆಡಳಿತಾಧಿಕಾರಿ ರಾಧಾಕೃಷ್ಣ ಎ., ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಲೀಡ್ ಸಂಯೋಜಕಿ ಮತ್ತು ಶಿಕ್ಷಕಿ ಶೇಖ್ ಝಕೀಯ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಲ್ಲದೆ ವಿಟ್ಲ ಪರಿಸರದ ಇತರ ಶಾಲಾ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.