ಕಾನೂನು ಸರಳೀಕರಣಗೊಳಿಸುವಂತೆ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿ ನಿಯೋಗ-ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ
ಪುತ್ತೂರು: ಕೆಂಪು ಕಲ್ಲು ಉದ್ಯಮದಲ್ಲಿ ಸರಕಾರದ ಎಲ್ಲಾ ನಿಯಮ ಪಾಲನೆ ಮಾಡಿಕೊಂಡು ಕಲ್ಲು ಉತ್ಪಾದನೆ ಹಾಗೂ ಖರೀದಿಗಳು ಅಸಾಧ್ಯವಾಗಿದೆ. ಹೀಗಾಗಿ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಕಾನೂನು ಸರಳೀಕರಣಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಕೆಂಪು ಕಲ್ಲು ಪಾಯ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಹೇಳಿದರು.
ಬೊಳುವಾರು ಮಹಾವೀರ ವೆಂರ‍್ಸ್ ನ ಸಭಾಂಗಣದಲ್ಲಿ ನ.6ರಂದು ನಡೆದ ಕೆಂಪು ಕಲ್ಲು ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಪುತ್ತೂರು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೆಂಪು ಕಲ್ಲು ಎಲ್ಲರಿಗೂ ಆವಶ್ಯಕ. ಬಹಳಷ್ಟು ಮಂದಿಗೆ ಉದ್ಯೋಗ ನೀಡಿದ್ದರೂ ಅದು ಕ್ಲಿಷ್ಟಕರ ಉದ್ಯಮವಾಗಿದೆ. ಕೆಂಪು ಕಲ್ಲು ಗಣಿ ಇಲಾಖೆ ವ್ಯಾಪ್ತಿಯಲಿಲ್ಲ. ಅಲ್ಲದೆ ಕೆಂಪು ಕಲ್ಲಿನಲ್ಲಿ ಖನಿಜಾಂಶ ಇಲ್ಲದೇ ಇದ್ದರೂ ರಾಜಧನ ಪಾವತಿಸಬೇಕಾದ ಅನಿವಾರ್ಯತೆಯಿದೆ. ಹೀಗೆ ಮುಂದುವರಿದರೆ ಉಯಮ ಉಳಿಯಲು ಸಾಧ್ಯವಿಲ್ಲ. ಕಾನೂನುಗಳು ಸರಳೀಕರಣವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟಿತ ಹೋರಾಟದ ಆವಶ್ಯಕತೆಯಿದೆ. ಇದಕ್ಕಾಗಿ ವಲಯ ಸಮಿತಿಗಳು ಬಲಿಷ್ಠವಾಗಬೇಕು. ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಬೇಕು. ಬಹುದೊಡ್ಡ ಹೋರಾಟದಿಂದ ಸರಕಾರವನ್ನು ಎಚ್ಚರಿಸುವ ಕೆಲಸವಾಗಬೇಕು. ಸಂಘಟಿತ ಹೋರಾಟದ ಮೂಲಕ ನಮ್ಮ ಉದ್ಯಮವನ್ನು ಭದ್ರಗೊಳಿಸಬೇಕು ಎಂದು ಹೇಳಿದರು.
ಕೆಂಪು ಕಲ್ಲು ಪಾಯ ಮ್ಹಾಲಕರ ಸಂಘದ ಜಿಲ್ಲಾ ಕಾರ್ಯದರ್ಶಿ ರವಿ ರೈ ಕೊಣಾಜೆ ಮಾತನಾಡಿ, ದ.ಕ ಜಿಲ್ಲೆ ಹಾಗೂ ಕರಾವಳಿಯಲ್ಲಿ ಕೆಂಪು ಕಲ್ಲು ದೊಡ್ಡ ಉದ್ಯಮ. ಕಟ್ಟಡ ನಿರ್ಮಾಣಕ್ಕೆ ಇದೊಂದು ಮೂಲ ಸೌಕರ್ಯವಾಗಿರುವುದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಉದ್ಯಮವಾಗಿದೆ. 2019ರ ಸರಕಾರದ 3ಎ ಕಾನೂನುನಿಂದಾಗಿ ರಾಜಧನ ಪಾವತಿಯ ನಿಯಮ ಸರಿಯಾಗಿಲ್ಲದೆ ಇದ್ದು ಸಮಸ್ಯೆಯಾಗಿದೆ. ವಸ್ತುವಿನ ಬೆಲೆಗಿಂತ ಅಧಿಕ ತೆರಿಗೆ ಮೊತ್ತ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಲೋಡ್ ಕಲ್ಲಿಗೆ ಅನುಮತಿ ಪಡೆಯಬೇಕಾದ ಸಮಸ್ಯೆ ಉದ್ಬವವಾಗಿತ್ತು. ಈ ಸಂದರ್ಭದಲ್ಲಿ ನಡೆಸಿದ ಹೋರಾಟದ ಫಲವಾಗಿ ಕಾನೂನು ಸರಳೀಕರಣಗೊಂಡು ಜಿಲ್ಲೆಯಲ್ಲಿ 250ಕ್ಕೂ ಅಧಿಕ ಪಾಯಗಳು ಕಾನೂನು ಬದ್ದವಾಗಿ ನಡೆಯುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ನಮ್ಮ ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕು. ನಮಗೆ ಪಕ್ಷವಿಲ್ಲ. ಕೆಂಪು ಕಲ್ಲೇ ನಮಗೆ ಪಕ್ಷ. ಸಂಘಟನೆಗಾಗಿ ಒಗ್ಗಟ್ಟಿನಿಂದ ಕೆಲಸಮಾಡಬೇಕು ಎಂದು ಹೇಳಿದರು.
ಕೆಂಪು ಕಲ್ಲು ಪಾಯ ಮ್ಹಾಲಕರ ಸಂಘದ ಜಿಲ್ಲಾ ಕೋಶಾಧಿಕಾರಿ ರಾಮಣ್ಣ ಮುಗೆರೋಡಿ ಮಾತನಾಡಿ, ಕೆಂಪು ಕಲ್ಲು ಉದ್ಯಮವನ್ನು ಗಣಿಗಾರಿಕೆಯಿಂದ ಪ್ರತ್ಯೇಕಿಸಿ, ಈಗಿರುವ ಕಾನೂನು ಸರಳೀಕರಣಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಸ್ಪಂಧನೆ ದೊರೆಯದಿದ್ದರೆ ಹೋರಾಟ ನಡೆಸಬೇಕಾದ ಆವಶ್ಯಕತೆಯಿದೆ. ಇಲ್ಲದಿದ್ದರೆ ಸರಕಾರದ ಈ ರೀತಿಯ ಕಾನೂನುನಿಂದಾಗಿ ತೆರಿಗೆ ಪಾವತಿಸಿ ಉದ್ಯಮ ಮುನ್ನಡೆಸಲು ಸಾಧ್ಯವಿಲ್ಲ. ಒಂದು ವಾರ ಪಾಯ ಬಂದ್ ಮಾಡಿಯಾದರೂ ಹೋರಾಟ ನಡೆಸಿ ಸರಕಾರವನ್ನು ಎಚ್ಚಿರಿಸಬೇಕಾದ ಆವಶ್ಯಕತೆ ಇದೆ ಎಂದ ಅವರು ಜಿಲ್ಲಾ ಸಂಘದ ಮನವಿಗೆ ವಲಯಗಳು ಸ್ಪಂಧಿಸಬೇಕು ಎಂದು ಹೇಳಿದರು.
ಕೆಂಪು ಕಲ್ಲು ಉತ್ಪಾದಕರ ಮತ್ತು ಮಾರಾಟಗಾರರ ಸಂಘ ಪುತ್ತೂರು ವಲಯದ ಗೌರವಾಧ್ಯಕ್ಷ ಎನ್.ಎಸ್ ಅಬ್ದುಲ್ ಕುಂಞ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಎ.ಕೆ ಮೇರ್ಲ, ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ವಿಟ್ಲ ವಲಯಾಧ್ಯಕ್ಷ ರಮೇಶ್ ವಿ., ಮುಡಿಪು ವಲಯಾಧ್ಯಕ್ಷ ವಿಶ್ವನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪುತ್ತೂರು ವಲಯದ ನಿಕmಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಅಮರ್ ಸೊರಕೆ, ಕೆಂಪು ಕಲ್ಲು ಪಾಯ ಮ್ಹಾಲಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಕಾರ್ಯದರ್ಶಿ ರವಿ ರೈ ಕೊಣಾಜೆ, ಕೋಶಾಧಿಕಾರಿ ರಾಮಣ್ಣ ಮುಗೆರೋಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಶಕ್ತರಿಗೆ ಧನಸಹಾಯ:
ಲೋಕೇಶ್ ಸುಳ್ಯ ಪದವು, ಗಣೇಶ್ ನಿಡ್ಪಳ್ಳಿ, ಐತ್ತಪ್ಪ ಮಾಯ್ತಡ್ಕ, ಸಾಲಪ್ಪ ಕಲ್ಲರ್ಪೆ, ಆಲಿಕುಂಣಿ ಏಂಪೆಕಲ್ಲು, ಇಬ್ರಾಹಿಂ, ಅನನ್ಯ ಮೈಂದನಡ್ಕ, ಪದ್ಮಯ್ಯ ಅಡ್ಕಾರ್, ಜಯಂತ ಬಂಟ್ವಾಳ,ಬಾಲಕೃಷ್ಣ ನಾಯ್ಕ ತಿಂಗಳಾಡಿ, ಪ್ರಶಾಂತ್ ಕಲ್ಲುಗುಂಡಿ, ಮನು ತಿಂಗಳಾಡಿ, ರಂಗ ಪುರುಷರಕಟ್ಟೆ ಹಾಗೂ ಮೈಮೂನ ಕೂಡುರಸ್ತೆಯವರಿಗೆ ಸಂಘದ ವತಿಯಿಂದ ಆರ್ಥಿಕ ಧನಸಹಾಯ ವಿತರಿಸಲಾಯಿತು.
ಪುತ್ತೂರು ವಲಯದ ಸ್ಥಾಪಕಾಧ್ಯಕ್ಷ ಅಮರ್ ಸೊರಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರವಿಶಂಕರ್, ಬಶೀರ್ ರೆಂಜ, ಅಜಿತ್ ಕಾಯರ್ ಪದವು, ಸಂಶುದ್ದೀನ್, ಪ್ರಶಾಂತ್ ರೈ, ರಫೀಕ್ ಕೆ.ಟಿ.ಅತಿಥಿಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಿದರು. ನೂತನ ಉಪಾಧ್ಯಕ್ಷ ಭರತ್ ಈಶ್ವರಮಂಗಲ ವಂದಿಸಿದರು. ಕೃತಿಕಾ ಸದಾಶಿವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಪದಗ್ರಹಣ:
ಪುತ್ತೂರು ವಲಯದ ನೂತನ ಅಧ್ಯಕ್ಷರಾಗಿ ಹೇಮಚಂದ್ರ ಮುರ, ಕಾರ್ಯದರ್ಶಿಯಾಗಿ ರಫೀಕ್ ಕೆ.ಟಿ., ಖಜಾಂಚಿಯಾಗಿ ರವಿ ಮಂಜುನಾಥ, ಉಪಾಧ್ಯಕ್ಷರಾಗಿ ಭರತ್ ಈಶ್ವರಮಂಗಲ, ಜತೆ ಕಾರ್ಯದರ್ಶಿಯಾಗಿ ಸಾದಿಕ್ ಎ., ಸದಸ್ಯರಾಗಿ ಬಶೀರ್ ರೆಂಜ, ಅಜಿತ್ ಕಾರ್ಯಪದವು, ಪ್ರಶಾಂರ್ ಎನ್.ಆರ್., ವಿನೋದ್ ಬಿ.ಆರ್., ಯತೀಶ್ ಆಚಾರ್ ಸುಳ್ಯ, ಇಲ್ಯಾಸ್ ಸುಳ್ಯ, ಪ್ರಕಾಶ್ ಸುಳ್ಯ ಹಾಗೂ ತೀರ್ಥಪ್ರಸಾದ್ ಸುಳ್ಯರವರು ಪದಸ್ವೀಕಾರ ಮಾಡಿದರು.