ಪುತ್ತೂರು: ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಪಡುವನ್ನೂರು ಮತ್ತು ನೆ.ಮುಡ್ನೂರು ಗ್ರಾಮಸ್ಥರ ಪರವಾಗಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲರವರ ನೇತೃತ್ವದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸಲಾಯಿತು.
ನೆ.ಮುಡ್ನೂರು ಗ್ರಾಮದ ಕೊಟ್ಯಾಡಿ, ಗಾಳಿಮುಖ, ಪಳ್ಳತ್ತೂರು, ಮೇನಾಲ, ಈಶ್ವರಮಂಗಲ, ಪಡುವನ್ನೂರು ಗ್ರಾಮದ ಹಾಗೂ ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಸುಮಾರು 20 ಸಾವಿರಕ್ಕಿಂತಲೂ ಅಧಿಕ ಜನರು ವಾಸ ಮಾಡಿಕೊಂಡಿದ್ದಾರೆ. ಈಶ್ವರಮಂಗಲದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಎರಡು ದಿನ ಮಾತ್ರ ವೈದ್ಯರು ಇರುವುದರಿಂದ ಜನರಿಗೆ ಸಮಸ್ಯೆಯಾಗಿದ್ದು ದೂರದ ಪುತ್ತೂರಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಇಲ್ಲಿಗೆ ಇಬ್ಬರು ಖಾಯಂ ವೈದ್ಯರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ರಮೇಶ್ ರೈ ಸಾಂತ್ಯ, ಶ್ರೀರಾಮ ಪಕ್ಕಳ, ಅಬ್ದುಲ್ಲ ಮೆನಸಿಣಕಾಣ, ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸಾನ್ ಹಾಜಿ ಕರ್ನೂರು, ತ್ವಾಹ ಬಿ.ಸಿ, ಮುಸ್ತಫಾ ಮಿನಿ ಮೇನಾಲ, ಅಬ್ಬು ಮೇನಾಲ, ಹಾರಿಸ್ ಮೇನಾಲ, ಸಲಾಂ ಎಂ.ಎ ಮನವಿ ನೀಡುವ ನಿಯೋಗದಲ್ಲಿದ್ದರು.