ಕುಂಬ್ರ ಮರ್ಕಝುಲ್ ಹುದಾ ಬೆಳ್ಳಿಹಬ್ಬ ʼಸಿಲ್ವರಿಯಂʼ ಘೋಷಣೆ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ 25 ವರ್ಷಾಚರಣೆಯ ಸನಿಹದಲ್ಲಿದ್ದು `ಸಿಲ್ವರಿಯಂ’ ಎಂಬ ಹೆಸರಿನಲ್ಲಿ ಎರಡು ವರ್ಷ ವಿಜೃಂಭಣೆಯಿಂದ ಬೆಳ್ಳಿಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ.ಝೈನೀ ಕಾಮಿಲ್ ಚರ್ಚೆಗೆ ನೇತೃತ್ವ ವಹಿಸಿದ್ದರು.

2001 ಜನವರಿ 26 ರಂದು ಶಿಲಾನ್ಯಾಸ ಮಾಡಲ್ಪಟ್ಟ ಮರ್ಕಝ್‌ಗೆ 2026 ಜನವರಿ 26 ರಂದು ಇಪ್ಪತ್ತೈದು ವರ್ಷಗಳು ಭರ್ತಿಯಾಗುತ್ತಿದ್ದು ಇದರ ಅಂಗವಾಗಿ 2024 ಜನವರಿ 26 ರಿಂದ 2026 ಜನವರಿ 26 ತನಕ ಸಿಲ್ವರ್ ಜುಬಿಲೀ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದೇ ತಿಂಗಳ ನ.26 ರಂದು ಸಿಲ್ವರಿಯಂ ಸ್ವಾಗತ ಸಮಿತಿ ರಚನಾ ಸಭೆ ಕುಂಬ್ರದಲ್ಲಿ ನಡೆಯಲಿದ್ದು, ಅಲ್ಲಿ ಎರಡು ವರ್ಷಗಳ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಕಾರ್ಯದರ್ಶಿಗಳಾದ ರಶೀದ್ ಬಿ.ಕೆ ಹಾಗೂ ಯೂಸುಫ್ ಮೈದಾನಿಮೂಲೆ, ಆಡಿಟರ್ ಅನ್ವರ್ ಹುಸೇನ್ ಗೂಡಿನಬಳಿ, ಸದಸ್ಯರಾದ ಯೂಸುಫ್ ಹಾಜಿ ಕೈಕಾರ, ಶಂಸುದ್ದೀನ್ ಬೈರಿಕಟ್ಟೆ, ಅಬ್ದುಲ್ ಹಮೀದ್ ಸುಳ್ಯ, ಆಶಿಕುದ್ದೀನ್ ಅಖ್ತರ್, ಕರೀಂ ಕಾವೇರಿ, ಮ್ಯಾನೇಜರ್ ಉಮರ್ ಅಮ್ಜದಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here