ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ನ.7 ರಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 4 ಪ್ರಥಮ, 1 ದ್ವಿತೀಯ ಹಾಗೂ 2 ತೃತೀಯ ಒಟ್ಟು 7 ಬಹುಮಾನಗಳನ್ನು ಪಡೆದಿರುತ್ತಾರೆ. ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದ 5 ಸ್ಪರ್ಧೆ ಯಲ್ಲಿ 6 ಮಕ್ಕಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಶ್ರವಣ್ ಯನ್. ಮತ್ತು ಮಾನಸ್ ಬಿ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶಿಲ್ಪ ಸಂಸ್ಕೃತ ಭಾಷಣದಲ್ಲಿ ಪ್ರಥಮ ಸ್ಥಾನ, ಮಹಮ್ಮದ್ ಆದಿಲ್ ಶಾ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, ಕವನ ವಾಚನ ಶ್ರವಣ್ ಎನ್ ಪ್ರಥಮ ಸ್ಥಾನ , ಮಹಮ್ಮದ್ ನವಾಜ್ ಹಿಂದಿ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ರಂಗೋಲಿ ಸ್ಪರ್ಧೆಯಲ್ಲಿ ಯಶಸ್ವಿ ತೃತೀಯ ಸ್ಥಾನ, ಹನ್ನತ್ ಮಸ್ತೂರ ಮಿಮಿಕ್ರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಶಾಲಾ ಅಧ್ಯಾಪಕ ವೃಂದ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಸಹಕರಿಸಿದರು ಎಂದು ಮುಖ್ಯಗುರು ಪುಷ್ಪಾವತಿ ಎಸ್. ತಿಳಿಸಿರುತ್ತಾರೆ.