ಕೊಯಿಲ ಬರಮೇಲು ನಿವಾಸಿ ಅಶೋಕ್ ಹೃದಯಾಘಾತದಿಂದ ನಿಧನ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಬರಮೇಲು ನಿವಾಸಿ, ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದ ಅಶೋಕ್(36ವ.)ರವರು ನ.5ರಂದು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಾರಣೆ ಕೆಲಸ ಮಾಡಿಕೊಂಡಿದ್ದ ಅಶೋಕ್ ಅವರಿಗೆ ನ.5ರಂದು ರಾತ್ರಿ 2 ಗಂಟೆ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗಾಗಲೇ ಅಶೋಕ್ ಅವರು ಮೃತಪಟ್ಟಿದ್ದರು. ಅಶೋಕ್ ಅವರು ನ.5ರಂದು ಸಂಜೆ ತನಕ ಸಾರಣೆ ಕೆಲಸ ಮಾಡಿ ಮನೆಗೆ ಬಂದಿದ್ದರು. ರಾತ್ರಿ ಮಲಗಿದ್ದವರಿಗೆ 2 ಗಂಟೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ಮನೆಯವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ತಂದೆ ಧರ್ಣಪ್ಪ, ತಾಯಿ ಧರ್ನಮ್ಮ, ಪತ್ನಿ ಭವಾನಿ, ಪುತ್ರ ಹರ್ಷೇಂದ್ರ, ಪುತ್ರಿ ಲಕ್ಷ್ಯ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here