ರಾಮನಾಮ ತಾರಕ ಮಂತ್ರ ಜಪ ಯಜ್ಞ ಕಾರ್ಯಕ್ರಮ

0

ಹಿಂದೂ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಅವಶ್ಯಕತೆ ಇದೆ – ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರದ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ರಾಮನಾಮತಾರಕ ಜಪ ಮಾಡಿ ರಾಮಲೀಲೆಯಲ್ಲಿ ತಲ್ಲೀನರಾಗಬೇಕು. ತನ್ಮೂಲಕ ನಮ್ಮ ಹಿಂದೂ ಪರಂಪರೆಯ ಮೇಲೆ ಶ್ರದ್ಧೆ ಅರಳಿಸಿ, ಪ್ರತಿಯೊಬ್ಬರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಅವಶ್ಯಕತೆ ಇದೆ ಎಂದು ಧಾರ್ಮಿಕ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ರಾಮನಾಮ ತಾರಕ ಮಂತ್ರ ಜಪ ಯಜ್ಞ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ರಾಮಮಂದಿರದ ಇತಿಹಾಸ, ರಾಮಮಂದಿರದ ಪುನರುತ್ಥಾನ, ಕಾನೂನಾತ್ಮಕ ಹೋರಾಟದ ಪರಿ, ನ್ಯಾಯಾಲಯ ತೀರ್ಪಿನ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ವಿವರಿಸಿದ ಅವರು, ಭವ್ಯ ರಾಮಮಂದಿರದ ಪುನರ್ ನಿರ್ಮಾಣದ ಸಂತಸವನ್ನು ರಾಮ ನಾಮ ಜಪ ಸಂಕೀರ್ತನೆ ಮೂಲಕ ಆಚರಿಸಬೇಕು. ಈ ಮೂಲಕ ನಮ್ಮೊಳಗೆ ರಾಮನ ಲೀಲೆಗಳನ್ನು ಕಾಣಬೇಕು ಎಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಮಾಜ ಕಲ್ಯಾಣಕ್ಕಾಗಿ ಹಿಂದೂ ದೇವಾಲಯಗಳ ಸ್ಥಾಪನೆ ಅವಶ್ಯವಾಗಿದೆ. ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಭಾರತೀಯರ ಭಾವನಾತ್ಮಕ ಸಂಬಂಧಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಅಶ್ವಿನಿ ಪಿ ಸ್ವಾಗತಿಸಿ, ಕುಮಾರಿ ದಿಶಾ ಕೆ ಎಸ್ ವಂದಿಸಿದರು.

LEAVE A REPLY

Please enter your comment!
Please enter your name here