ಕಾಲ ಬುಡದಲ್ಲಿ ಆಗಿರುವ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಲು ಶಾಸಕರಿಗೆ ಒತ್ತಡ ತರುವುದನ್ನು ಬಿಟ್ಟು ಬಿ.ಜೆ.ಪಿ ಮತ್ತು ಮಾಜಿ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ

0

ಒಳಮೊಗ್ರು ಕಾಂಗ್ರೆಸ್ ವಲಯ ಅಧ್ಯಕ್ಷ ಅಶೋಕ್ ಪೂಜಾರಿಯವರಿಗೆ ಬಿಜೆಪಿ ಯುವಮೋರ್ಚ ಕಾರ್ಯದರ್ಶಿ ಪ್ರದೀಪ್ ಎಸ್ ಸೇರ್ತಾಜೆ ಪ್ರಶ್ನೆ

ಪುತ್ತೂರು: ತನ್ನ ಕಾಲ ಬುಡದಲ್ಲಿ ಆಗಿರುವ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಲು ಶಾಸಕರಿಗೆ ಒತ್ತಡ ತರುವುದನ್ನು ಬಿಟ್ಟು ರಾಜ್ಯ ಬಿ.ಜೆ.ಪಿ ಮತ್ತು ಮಾಜಿ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಕಾಂಗ್ರೇಸ್ ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್ ಪೂಜಾರಿ ಯವರಿಗೆ ಒಳಮೊಗ್ರು ಪಂಚಾಯತ್ ಸದಸ್ಯರಾಗಿರುವ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಯುವಮೋರ್ಚ ಕಾರ್ಯದರ್ಶಿ ಯಾದ ಪ್ರದೀಪ್ ಎಸ್ ಸೇರ್ತಾಜೆ ಪ್ರಶ್ನಿಸಿದ್ದಾರೆ.
ತಿಂಗಳ ಹಿಂದೆ ಕುಂಬ್ರ ಕೆ.ಪಿ.ಎಸ್ ಶಾಲೆಯಲ್ಲಿ ಕಳ್ಳತನ ನಡೆದು ದಿನಗಳು ಉರುಳಿದರೂ ನಿಮಗೆ ನಿಮ್ಮ ಶಾಸಕರಲ್ಲಿ ಒತ್ತಡ ತಂದು ಕಳ್ಳರನ್ನು ಬಂಧಿಸಲು ಆಗಲಿಲ್ಲ ಆದರೆ ನಿಮ್ಮ ಅನಧಿಕೃತ ಮರದ ವ್ಯವಹಾರದ ಲಾರಿಯನ್ನು ಅರಣ್ಯ ಇಲಾಖೆ ಹಿಡಿದಾಗ ಮಧ್ಯರಾತ್ರಿ ಶಾಸಕರಿಗೆ ಒತ್ತಡ ತಂದು ಕ್ಷಣ ಮಾತ್ರದಲ್ಲಿ ಬಿಡಿಸುವ ಸಾಮರ್ಥ್ಯ ಇರುವ ನಿಮಗೆ ನಿಮ್ಮದೇ ಹತ್ತಿರದ ಶಾಲೆಯ ಕಳ್ಳತನದ ಬಗ್ಗೆ ಉದಾಸಿನ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮತಾಂಧರಿಂದ ಬಲಿಯಾದ ಪುವೀಣ್ ನೆಟ್ಟಾರ್ ಬಗ್ಗೆ ಮಾತನಾಡುವ ನೀವು ಆವಾಗ ಬಿಜೆಪಿ ಸರಕಾರ ಎನ್.ಐ.ಎ ಗೆ ನೀಡಿ ಪಿ.ಎಫ್.ಐ ಭಯೋತ್ಪಾದಕರನ್ನು ಬಂಧಿಸಿದ್ದು ಮತ್ತು ಸಂಘಟನೆಯನ್ನು ನಿಷೇಧ ಮಾಡಿದ್ದನ್ನು ನೀವು ಮರೆತಿರಬಹುದು. ಇತ್ತೀಚೆಗೆ ನಿಮ್ಮ ಶಾಸಕರು ಸುಳ್ಳು ಭರವಸೆಯನ್ನು ನೀಡುವುದು ಹಾಗೂ ಮಾಜಿ ಶಾಸಕರು ಮಾಡಿದ ಕಾಮಗಾರಿಯ ಎದುರು ಫೋಟೋ ಗೆ ಪೋಸ್ ಕೊಡುವುದು ಬಿಟ್ಟು ನಿಮ್ಮದೇ ಸರಕಾರ ಇರುವಾಗ ಗ್ರಾಮಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದು ಒಳಿತು ಎಂದು ಅಶೋಕ್ ಪೂಜಾರಿ ಅವರಿಗೆ ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here