ನ.7-18: ಶ್ರೀಧರ್ ಭಟ್ ಬ್ರದರ‍್ಸ್ ಫರ್ನಿಚರ್ ಶೋರೂಂನಲ್ಲಿ ದೀಪಾವಳಿ ವಿಶೇಷ ಸೇಲ್

0

ಈ ಬಾರಿಯ ದೀಪಾವಳಿಗೆ ನಿಮ್ಮಿಷ್ಟದ ಫರ್ನಿಚರ್ ಗಳೊಂದಿಗೆ ಮನೆ ಬೆಳಗಿಸಿ…!

ಪುತ್ತೂರು: ಮನೆ ಮತ್ತು ಕಚೇರಿಗಳಿಗೆ ಫರ್ನಿಚರ್ ಗಳು ವಿಶೇಷ ಶೋಭೆಯನ್ನು ನೀಡುತ್ತವೆ. ಮನೆಗೆ ಅತಿಥಿ ಗಣ್ಯರು ಮತ್ತು ನೆಂಟರು ಬಂದಾಗ ಸುಖಾಸೀನದ ಅನುಭವವನ್ನು ನೀಡುವದೇ ಈ ಫರ್ನಿಚರ್ ಗಳು ಎಂದರೆ ತಪ್ಪಾಗಲಾರದು. ಸೋಫಾ, ಟೇಬಲ್, ಕುರ್ಚಿಗಳು ಪ್ರತೀ ಮನೆ ಮತ್ತು ಕಚೇರಿಗಳ ಅತ್ಯಗತ್ಯತೆಯೂ ಹೌದು. ವೈವಿಧ್ಯಮಯ ಮತ್ತು ದೀರ್ಘಬಾಳಿಕೆಯ ವಿಚಾರದಲ್ಲಿ ಪುತ್ತೂರು ಭಾಗದವರ ಅನೇಕ ವರ್ಷಗಳ ನಂಬಿಕೆಯ ಶೋರೂಂ ಆಗಿರುವ ಶ್ರೀಧರ್ ಭಟ್ ಬ್ರದರ‍್ಸ್ ಫರ್ನಿಚರ್ ಶೋರೂಂನಲ್ಲಿ ಈ ಬಾರಿಯ ದೀಪಾವಳಿ ವಿಶೇಷ ಸೇಲ್ ನ.07 ರಿಂದ 18ರವರೆಗೆ ನಡೆಯಲಿದೆ.

ಈಗಾಗಲೇ, ಎಲ್ಲಾ ವರ್ಗದ ಗ್ರಾಹಕರ ಮನಸ್ಸಿಗೊಪ್ಪುವಂತೆ ಫರ್ನಿಚರ್ಗಳ ಜೊತೆಗೆ ವಿಶೇಷ ರಿಯಾಯಿತಿ ಹಾಗೂ ಪ್ರತೀ ಖರೀದಿಯೊಂದಿಗೆ ವಿಶೇಷ ಗಿಫ್ಟ್ ಗಳೂ ಲಭ್ಯವಿದ್ದು, ಬೆಡ್ ಖರೀದಿಯೊಂದಿಗೆ ಪಿಲ್ಲೋ ಮತ್ತು ಬೆಡ್ ಶೀಟ್ ಉಚಿತವಿದ್ದು ಇದು ಗ್ರಾಹಕರಿಗೆ ತಾವು ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆದುಕೊಳ್ಳಬಹುದು. ಇನ್ನುಳಿದಂತೆ, ಟಿವಿ ಸ್ಟ್ಯಾಂಡ್ ಮತ್ತು ಇನ್ನಿತರ ಫರ್ನಿಚರ್ ಉತ್ಪನ್ನಗಳು ಹಾಗೂ ಎಲ್ಲಾ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಸುಡುಮದ್ದು ಮತ್ತು ಗಿಫ್ಟ್ ಪ್ಯಾಕ್ ಗಳು ಹಾಗೂ ವಿನೂತನ ಮಾದರಿಯ ಪಟಾಕಿಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು, ಗ್ರಾಹಕರು ಈ ಎಲ್ಲಾ ಆಫರ್ ಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here