ರಾಮಕುಂಜ ವಿದ್ಯಾಸಂಸ್ಥೆಯಲ್ಲಿ ಇಸ್ರೋ ಸಹಯೋಗದಲ್ಲಿ “ಸ್ಪೇಸ್ ಆನ್ ವೀಲ್ಸ್”

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ದಕ್ಷಿಣ ಕನ್ನಡ ವಿಜ್ಞಾನ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದ.ಕ. ಘಟಕ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು (ಇಸ್ರೋ) ಇವರ ಸಂಯುಕ್ತ ಆಶ್ರಯದಲ್ಲಿ “ಸ್ಪೇಸ್ ಆನ್ ವೀಲ್ಸ್” ಕಾರ್ಯಕ್ರಮ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಜರಗಿತು.
ಪಿಡಬ್ಲೂಡಿ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ. ಅವರು ಉದ್ಘಾಟಿಸಿದರು. ಸೈನ್ಸ್ ಫೌಂಡೇಶನ್ ದಕ್ಷಿಣ ಕನ್ನಡದ ಉಪಾಧ್ಯಕ್ಷ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಕರಾದ ಕೇಶವ ಎ., ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು (ಇಸ್ರೋ) ಇದರ ವಿಜ್ಞಾನಿಗಳಾದ ಶ್ರೀನಿವಾಸ್ ಮಾತನಾಡಿದರು. ಕೊಯಿಲ ಪಶು ವೈದ್ಯಕೀಯ ಕೇಂದ್ರದ ಜಂಟಿ ನಿರ್ದೇಶನ ನಿರ್ದೇಶಕ ಡಾ.ಪ್ರಸನ್ನರವರು ಪ್ರದರ್ಶನ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ವಂದಿಸಿದರು. ಶಾಲಾ ಹಿರಿಯ ಶಿಕ್ಷಕ ದಿನೇಶ್ ಬಿ.ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶ್ರವಣ್ ಪ್ರಾರ್ಥಿಸಿದನು.

LEAVE A REPLY

Please enter your comment!
Please enter your name here