ಬಡಗನ್ನೂರು: ಪಟ್ಟೆ ಶ್ರೀ ಕೃಷ್ಣಅ.ಹಿ.ಪ್ರಾ.ಶಾಲೆಯಲ್ಲಿ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರಾ. ಶಾಲಾ ವಿಭಾಗದ ಚಿಣ್ಣರ ಚಿಲಿಪಿಲಿ ಪ್ರತಿಭಾ ಕಾರಂಜಿ

0

ಬಡಗನ್ನೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ, ಕುಂಬ್ರ ಹಾಗೂ ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಟ್ಟೆ ಇದರ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಚಿಣ್ಣರ ಚಿಲಿಪಿಲಿ ಪ್ರತಿಭಾ ಕಾರಂಜಿ ಸ್ಪರ್ಧೆ 2023-24 ಕಾರ್ಯಕ್ರಮವು ನ.11ರಂದು ಪಟ್ಟೆ ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕುಂಬ್ರ  ಕ್ಲಸ್ಟರ್ ಮಟ್ಟದ ಸುಮಾರು 12 ಪ್ರಾಥಮಿಕ ಶಾಲಾ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here