ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಶೋರೂಮ್‌ನಲ್ಲಿ ದೀಪಾವಳಿ ಬಿಗ್ ಸೇಲ್ ಆರಂಭ

0

ಭಾರೀ ಡಿಸ್ಕೌಂಟ್ * ಖಚಿತ ಗಿಪ್ಟ್ * ಉಚಿತ ಸಾಗಾಟ * ಕ್ಯಾಶ್‌ಬ್ಯಾಕ್ * ಲಕ್ಕಿ ಕೂಪನ್ * ಇನ್ನೆಲ್ಲೂ ಸಿಗದ ಕಡಿಮೆ ಬೆಲೆ


ಪುತ್ತೂರು: ಹತ್ತೂರ ಜನರ ಮನೆಮನ ಗೆದ್ದಿರುವ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಸೇಲ್ ಆರಂಭಗೊಂಡಿದೆ. ಕಳೆದ 9 ವರ್ಷಗಳಿಂದ ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ತನ್ನದೇ ಶೈಲಿಯ ಕಾರ್ಯನಿರ್ವಹಣೆಗೆ ಪ್ರತಿ ಮನೆಯ ಸದಸ್ಯರ ಮನದಲ್ಲಿ ಅಚ್ಚಾಗಿರುವ ಅತಿಥಿಯು ಪ್ರತಿವರ್ಷದಂತೆ ಈ ವರ್ಷವೂ ತನ್ನೆಲ್ಲಾ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಇನ್ನೆಲ್ಲೂ ಸಿಗದ ಭಾರೀ ರಿಯಾಯಿತಿಯೊಂದಿಗೆ ಆಕರ್ಷಕ ಉಡುಗೊರೆ, ಬಹುಮಾನಗಳ ಸುರಿಮಳೆಯನ್ನೇ ಕೊಡುತ್ತಿದೆ.
ಕುಂಬ್ರದ ಬೃಹತ್ ಶೋರೂಮ್ ಸೋನಿ, ಎಲ್‌ಜಿ, ಸ್ಯಾಮ್‌ಸಂಗ್, ಲಿಬೆರ್, ವಿರ್ಫೂಲ್ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಂಗಳು, ಗುಣಮಟ್ಟದ ಫರ್ನಿಚರ‍್ಸ್‌ಗಳಿರುವ ಗ್ರಾಮೀಣ ಭಾಗದ ಅತ್ಯಂತ ದೊಡ್ಡ ಶೋರೂಮ್ ಇದಾಗಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿಗಳ ನಗುಮೊಗದ ಸೇವೆ, ವಸ್ತುಗಳ ಉಚಿತ ಸಾಗಾಟ, ಖರೀದಿ ಬಳಿಕವೂ ತೃಪ್ತಿದಾಯಕ ಸೇವೆ ಇತ್ಯಾದಿಗಳ ಮೂಲಕ ಅತಿಥಿ ಎಲ್ಲರ ಮನೆ ಮಾತಾಗಿರುವ ಅತಿಥಿ ಹತ್ತೂರಲ್ಲೂ ಗ್ರಾಹಕ ಬಳಗವನ್ನು ಹೊಂದಿದೆ.
ಶೇ.10ರಿಂದ 50ರ ತನಕ ಭಾರೀ ರಿಯಾಯಿತಿ
ದೀಪಾವಳಿ ಹಬ್ಬದ ಸಲುವಾಗಿ ಪ್ರತಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ಗಳ ಮೇಲೆ ಶೇ.10 ರಿಂದ 50ರ ತನಕ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಫರ್ನಿಚರ‍್ಸ್‌ನ ಬಾಳ್ವಿಕೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಫರ್ನಿಚರ‍್ಸ್‌ಗಳನ್ನು ಅತಿಥಿ ನೀಡುತ್ತಿದೆ.



ರೂ.2 ಸಾವಿರ ಖರೀದಿಗೆ ಲಕ್ಕಿ ಕೂಪನ್
ರೂ.2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್‌ಗಳನ್ನು ನೀಡುತ್ತಿದೆ. 2 ಸಾವಿರಕ್ಕೆ ಒಂದರಂತೆ ಲಕ್ಕಿ ಕೂಪನ್‌ಗಳನ್ನು ಪಡೆಯಬಹುದಾಗಿದ್ದು ಇದರಲ್ಲಿ ಟಿವಿ, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ವಾರ್ಡ್‌ರೂಬ್ ಬಹುಮಾನಗಳಿವೆ. ಇದರ ಡ್ರಾ ಕೂಡ ಅತಿಥಿ ಶೋರೂಮ್‌ನಲ್ಲೇ ನಡೆಯಲಿದೆ.

ಟಿವಿ,ಮಿಕ್ಸಿ,ಗ್ರೈಂಡರ್,ವಾರ್ಷಿಂಗ್ ಮೆಷಿನ್ ಮಾಂತೆಗ್ಲಾ ಎಕ್ಸ್‌ಚೇಂಜ್ ಉಂಡು…
ಇನ್ನಷ್ಟು ದಿನ ಅದೇ ಹಳೆಯ ಟಿವಿ,ಮಿಕ್ಸಿ,ವಾಷಿಂಗ್ ಮೆಷಿನ್ ಯೂಸ್ ಮಾಡ್ತೀರಾ…ಈ ವರ್ಷದ ದೀಪಾವಳಿಗೆ ಅತಿಥಿಯಲ್ಲಿ ಬಿಗ್ ಎಕ್ಸ್‌ಚೇಂಜ್ ಆಫರ್ ಇದ್ದು ಟಿವಿ, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್‌ಗಳನ್ನು ಹೊಸತರೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಿ. ಅದು ಕೂಡ ಆಕರ್ಷಕ ಎಕ್ಸ್‌ಚೇಂಜ್ ದರದಲ್ಲಿ ಇದಲ್ಲದೆ ಟಿವಿಗಳಿಗೆ 3 ವರ್ಷಗಳ ವಾರಂಟಿ ಕೂಡ ಇದೆ.

ಮೊಬೈಲ್‌ಗಳ ಮೇಲೆ ರೂ.6 ಸಾವಿರ ತನಕ ರಿಯಾಯಿತಿ
ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಹಿಡಿಯಲೇಬೇಕು ಅದಕ್ಕಾಗಿಯೇ ಅತಿಥಿ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಬಿಗ್ ಆಫರ್ ನೀಡುತ್ತಿದೆ. ಆಪಲ್ ಐಫೋನ್, ವಿವೋ, ಸ್ಯಾಮ್‌ಸಂಗ್, ಒಪ್ಪೋ, ರಿಯಲ್‌ಮಿ, ನೊಕಿಯೋ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್ ಖರೀದಿ ಮೇಲೆ 6 ಸಾವಿರ ರೂ.ತನಕ ರಿಯಾಯಿತಿ ಪಡೆಯಬಹುದಾಗಿದೆ. ಸ್ಪಿನ್ ಆಂಡ್ ವಿನ್ ಮೂಲಕ ಬಹುಮಾನ, ಐಫೋನ್ ಖರೀದಿದಾರರಿಗೆ 2 ವರ್ಷಗಳ ಅವಧಿಯ ಇಎಂಐ ಸೌಲಭ್ಯ ಎಲ್ಲವೂ ಇಲ್ಲಿದೆ.

ಫರ್ನಿಚರ್‌ಗಳ ಬೃಹತ್ ಮಳಿಗೆ
ಅತಿಥಿಯಲ್ಲಿ ಫರ್ನಿಚರ‍್ಸ್‌ನ ಬೃಹತ್ ಮಳಿಗೆ ಇದ್ದು ಮನೆಗೆ ಬೇಕಾದ ಸೋಫಾ, ದಿವಾನ, ಕಾರ್ನರ್ ಸೋಫಾ, ಡೈನಿಂಗ್ ಟೇಬಲ್ ಏನೇನು ಬೇಕು ಅವೆಲ್ಲವೂ ಇಲ್ಲಿದೆ. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ಇದ್ದು ಬೆಲೆಯಲ್ಲಿ ಮಾತ್ರ ಎಲ್ಲಿಯೂ ಸಿಗದ ಅತೀ ಕಡಿಮೆ ಬೆಲೆ ಇಲ್ಲಿದೆ.

ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳ ಬೃಹತ್ ಸಂಗ್ರಹ
ಇಂದಿನ ಆಧುನಿಕ ಯುಗದಲ್ಲಿ ಜನರಿಗೆ ಬ್ರ್ಯಾಂಡೆಡ್ ಐಟಮ್‌ಗಳೇ ಬೇಕಾಗುತ್ತದೆ. ಅದಕ್ಕಾಗಿ ಅತಿಥಿಯಲ್ಲಿ ಎಲ್‌ಜಿ, ಸೋನಿ, ವಿರ್ಫೂಲ್, ಸ್ಯಾಮ್‌ಸಂಗ್, ಲಿಬೆರ್, ಆಪಲ್ ನಂತಹ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಮ್‌ಗಳ ಬೃಹತ್ ಸಂಗ್ರಹ ಅತಿಥಿಯಲ್ಲಿದೆ. ಜನ ಏನನ್ನು ಬಯಸುತ್ತಾರೋ ಅದಕ್ಕೆ ತಕ್ಕಂತೆ ಅತಿಥಿ ಅವರ ಬಯಕೆಗಳನ್ನು ಪೂರೈಸಲು ಸದಾ ಸಿದ್ಧವಿದೆ.

ಸ್ಪಿನ್ ಮಾಡಿ ವಿನ್ ಆಗಿ ಬಹುಮಾನ ಗೆಲ್ಲಿರಿ
ಇದು ಬಹುಷಹ ಅತಿಥಿಯಲ್ಲಿ ಮಾತ್ರ ಇರೋದು. ನಾವು ಖರೀದಿಸುವ ಯಾವುದೇ ಮೊಬೈಲ್ ಮತ್ತು ಇಲೆಕ್ಟ್ರಾನಿಕ್ಸ್ ಐಟಮ್‌ಗಳ ಮೇಲೆ ಸ್ಥಳದಲ್ಲೇ ಸ್ಪಿನ್ ಮಾಡಿ ವಿನ್ ಆಗಿ ಬಹುಮಾನ ಗೆಲ್ಲುವ ಅವಕಾಶವಿದೆ. ಇದಲ್ಲದೆ ಪ್ರತಿ ಖರೀದಿಯ ಮೇಲೆ ಖಚಿತ ಉಡುಗೊರೆಯೊಂದಿಗೆ ಉಚಿತ ಸಾಗಾಟ ವ್ಯವಸ್ಥೆ ಕೂಡ ಇಲ್ಲಿದೆ.

ಮಿಕ್ಸಿ, ಗ್ರೈಂಡರ್‌ಗ್ಲಾ ಮುಲ್ಪ ಲೋನ್ ತಿಕ್ಕುಂಡು…
ಇಲೆಕ್ಟ್ರಾನಿಕ್ಸ್ ಐಟಮ್‌ಗಳನ್ನು ರೂ.5 ಸಾವಿರಕ್ಕಿಂತ ಮೇಲ್ಪಟ್ಟ ಎಲ್ಲಾ ಖರೀದಿಗೂ ಇಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಇದೆ. ಕೈಯಲ್ಲಿ ಹಣ ಇಲ್ಲ ಎಂಬ ಚಿಂತೆಯನ್ನು ಬಿಟ್ಟು ಬಿಡಿ, ಮನೆಗೆ ಬೇಕಾದ ಮಿಕ್ಸಿ, ಗ್ರೈಂಡರ್ ಕೂಡ ಸಾಲ ಸೌಲಭ್ಯದೊಂದಿಗೆ ಮನೆಗೊಯ್ಯಿರಿ. ಕೇವಲ 101 ರೂಪಾಯಿ ಪಾವತಿಸಿ ನಿಮಗೆ ಬೇಕಾದ ಮೊಬೈಲ್‌ಗಳನ್ನು ಖರೀದಿಸುವ ಅವಕಾಶ ಇದೆ. ನೀವು ಬಜಾಜ್ ಅಥವಾ ಇನ್ನಿತರ ಫೈನಾನ್ಸ್‌ನ ಕಾರ್ಡ್‌ದಾರರೇ ಹಾಗಿದ್ದರೆ ನಿಮಗೆ ಶೂನ್ಯ ಪಾವತಿಯೊಂದಿಗೆ ಪರ್ಚೇಸ್ ಮಾಡುವ ಅವಕಾಶ ಅತಿಥಿಯಲ್ಲಿದೆ. ಕಡಿಮೆ ದಾಖಲೆ, ಕಡಿಮೆ ಬಡ್ಡಿದರ, ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ.

ಸಂದರ್ಶಿಸಿ, ಕರೆ ಮಾಡಿ
ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್,
ಅಕ್ಷಯ ಆರ್ಕೇಡ್ ಕುಂಬ್ರ, ಒಳಮೊಗ್ರು ಗ್ರಾಮ, ಪುತ್ತೂರು. 9590550111

LEAVE A REPLY

Please enter your comment!
Please enter your name here