ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಸಂಸ್ಥಾಪಕರ ದಿನಾಚರಣೆ, ರಕ್ತದಾನ ಶಿಬಿರ

0

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ರಕ್ತದಾನ ಶಿಬಿರವು ನ.10ರಂದು ನೆರವೇರಿತು.


ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಮಾತನಾಡಿ, ನನ್ನ ವಿದ್ಯಾರ್ಥಿ ಜೀವನದಲ್ಲಿಯೇ ಜಿ.ಎಲ್ ಆಚಾರ್ಯ ಜ್ಯವೆಲ್ಲರ‍್ಸ್ ಪುತ್ತೂರಿನ ಪ್ರತಿಷ್ಠಿತ ಜ್ಯುವೆಲ್ಸರ‍್ಸ್ ಎಂಬ ಖ್ಯಾತಿ ಪಡೆದಿತ್ತು. ಅಂದಿನಿಂದ ಇಂದಿನ ತನಕ ವ್ಯವಹಾರದಲ್ಲಿ ನೈತಿಕಯನ್ನು ಇಂದಿಗೂ ಬೆಳೆಸಿಕೊಂಡು ಬಂದಿದ್ದಾರೆ. ಜಿ.ಎಲ್ ಆಚಾರ್ಯ ಕುಟುಂಬದವರು ರೋಟರಿ ಸಂಸ್ಥೆಯ ಅಸ್ಥಿತ್ವಕ್ಕೂ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಸಂಸ್ಥಾಪಕರ ದಿನಾಚರಣೆಯು ಅರ್ಥಪೂರ್ಣವಾದ ದಿನವಾಗಿ ಆಚರಿಸಲಾಗುತ್ತಿದೆ. ಅವರ ಕುಟುಂಬವು ಸಮಾಜ ಸೇವೆಗೆ ತ್ಯಾಗ ಮಾಡುವ ಉದ್ದೇಶದಲ್ಲಿದ್ದು ರಕ್ತದಾನ ಶಿಬಿರವು ಸದುದ್ದೇಶದಿಂದ ಆಯೋಜಿಸಿಕೊಳ್ಳಲಾಗಿದೆ ಎಂದರು.
ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಮಾತನಾಡಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ ಜಿ.ಎಲ್ ಆಚಾರ್ಯ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಬ್ಲಡ್ ಬ್ಯಾಂಕ್‌ನ ಬೆಳ್ಳಿ ಹಬ್ಬ ಸಂಭ್ರಮವನ್ನು ಬಂಗಾರದ ಅಂಗಡಿಯಲ್ಲಿ ಆಚರಿಸಲಾಗುತ್ತಿದೆ. ವರ್ಷದ 365 ದಿನ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಬ್ಲಡ್ ಬ್ಯಾಂಕ್ ಐದು ತಾಲೂಕಿಗೆ ರಕ್ತ ಸರಬರಾಜ ಮಾಡಲಾಗುತ್ತದೆ ಎಂದರು.
ಸಂಸ್ಥೆಯ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರ ದಿನದ ಅಂಗವಾಗಿ ನಮ್ಮ ಸಿಬ್ಬಂದಿ ವರ್ಗದವರೇ ಆಸಕ್ತಿಯಿಂದ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದಾರೆ. ಮಳಿಗೆ ಎಲ್ಲಾ ಸಿಬ್ಬಂದಿಗಳು ಹಾಗೂ ನಮ್ಮ ಮಕ್ಕಳು ರಕ್ತದಾನ ಮಾಡಲಿದ್ದಾರೆ. ಅಲ್ಲದೆ ಸಂಸ್ಥಾಪಕರ ದಿನದ ಅಂಗವಾಗಿ ಪಟ್ಟೆ ಪ್ರತಿಭಾ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಕರಗಳ ಖರೀದಿಗೆ ದೇಣಿಗೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ, ಜಿ.ಎಲ್ ಆಚಾರ್ಯ ಮಳಿಗೆಯ ಸುದನ್ವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಟ್ಟೆ ಶಾಲೆಗೆ ದೇಣಿಗೆ:
ಮಳಿಗೆಯ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ದೇಣಿಗೆ ನೀಡಲಾಗಿದ್ದು ಶಿಕ್ಷಕ ವಿಶ್ವನಾಥರವರು ಚೆಕ್ ಸ್ವೀಕರಿಸಿದರು. ಬಲರಾಮ ಆಚಾರ್ಯ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀಕಾಂತ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here