ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ನರಿಮೊಗರಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾಣೆಯೂರು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದೆ.


ಸಂಸ್ಕೃತ ಧಾರ್ಮಿಕ ಪಠಣ ರಂಜನ್ ವಿ (10) ಪ್ರಥಮ, ಇಂಗ್ಲೀಷ್ ಭಾಷಣ ಪೃಥ್ವಿ ಎಂ(8) ಪ್ರಥಮ, ತುಳು ಭಾಷಣ ಮಾನ್ವಿ ಜಿ ಎಸ್(9) ಪ್ರಥಮ, ರಂಗೋಲಿ ದೀಕ್ಷಾ(9) ಪ್ರಥಮ, ಗಝಲ್ ಗ್ರೀಷ್ಮ ರೈ(9) ಪ್ರಥಮ, ಭಾವಗೀತೆ ಈಶಿತ ಕೆ (10) ಪ್ರಥಮ, ಮಿಮಿಕ್ರಿ ಅಕ್ಷಯ್ ಕೆ ಎಸ್(8) ಪ್ರಥಮ, ಜನಪದ ನೃತ್ಯ ನನ್ಮಯಿ ಎಂ (10) , ನೇಹಾಶ್ರೀ ಎ ಎಸ್ (10), ಹನ್ಸಿಕಾ ( 9) , ವೈಶಾಲಿ ಬಿ ಕೆ (9) , ನಿಶ್ಮಿತಾ ಕೆ (9), ರಿತಿಕಾ ಆರ್ ರೈ (8) ಪ್ರಥಮ, ಹಿಂದಿ ಭಾಷಣ ಯಶಸ್ವಿ ಕೆ (10) ದ್ವಿತೀಯ, ಚಿತ್ರಕಲೆ ಶ್ರದ್ಧಾ ಕೆ ಡಿ(9) ದ್ವಿತೀಯ, ಚರ್ಚಾ ಸ್ಪರ್ಧೆ ವಿಜ್ಞಾತ್ರಿ(8) ದ್ವಿತೀಯ, ಭರತನಾಟ್ಯ ತೃಪ್ತಿ ಕೋಟಾಜೆ (8) ದ್ವಿತೀಯ, ಆಶುಭಾಷಣ ಪ್ರಣಮ್ಯ ರೈ(8) ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಗೆ ಕಾರಣೀಭೂತರಾಗಿರುತ್ತಾರೆ.


ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಹಿಂದಿ ಭಾಷಣ ಸನ್ವತ್(10) ಪ್ರಥಮ, ಇಂಗ್ಲೀಷ್ ಭಾಷಣ ಆಯಿಷತ್ ಶಿಫಾ(10) ತೃತೀಯ, ಕವ್ವಾಲಿ ಮೊಹಮ್ಮದ್ ತಸ್ರೀಫ್(8) ಮಹಮ್ಮದ್ ಸಕೀರ್ (9) , ಮಹಮ್ಮದ್ ತಂಶೀರ್(9) ಮಹಮ್ಮದ್ ರಿಜ್ವಾನ್(9) , ಮಹಮ್ಮದ್ ಜಲಾಲುದ್ದೀನ್(10), ಮಹಮ್ಮದ್ ರಾಶಿದ್ (10) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here