ವಿಟ್ಲ: ಆತ್ಮವಿಶ್ವಾಸವೇ ಕ್ರೀಡಾಪಟುವಿಗೆ ಸ್ಪೂರ್ತಿಯಾಗುತ್ತದೆ, ಇದಕ್ಕೆ ನಿದರ್ಶನ ಜಾವೇಲಿನ್ನಲ್ಲಿ ಒಲಿಂಪಿಕ್ ಚಿನ್ನದ ಪದಕ ಬಾಚಿಕೊಂಡ ಕ್ರೀಡಾಪಟು ನೀರಜ್ ಚೋಪ್ರಾರವರಾಗಿದ್ದಾರೆ. ದೇಹಸಂಪತ್ತು ಕೂಡ ಕ್ರೀಡಾಪಟುವಿಗೆ ಭಗವಂತನ ಕೊಡುಗೆ, ನಿರಂತರ ಶ್ರಮ ಇದಕ್ಕೆ ಪೂರಕ ಎಂದು ಬ್ಯಾಂಕ್ ಆಫ್ ಬರೋಡ ಶಾಖಾಧಿಕಾರಿ, ನ್ಯಾಷನಲ್ ಲೆವೆಲ್ ವೆಯಿಟ್ ಲಿಫ್ಟ್ ನಲ್ಲಿ ಚಿನ್ನದ ಪದಕ ವಿಜೇತ ಪ್ರಕಾಶ್ ಎಸ್ ರವರು ಹೇಳಿದರು.
ಅವರು ವಿಟ್ಲದ ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಹಸನ್ ವಿಟ್ಲ ವಹಿಸಿದ್ದರು. ಕಾರ್ಯದರ್ಶಿ ಮೋಹನ ಎ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನನ್ಯ ರೈ ಯವರ ಕ್ರೀಡಾ ಪ್ರಮಾಣ ವಚನ ವಾಚಿಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಉಷಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಭಾನುಪ್ರಕಾಶ್ ಮತ್ತು ಶಶಿಕಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕಿಯರಾದ ಸೀಮಾ ಮಸ್ಕರೇನಸ್ ಮತ್ತು ಪ್ರಶಾಂತಿ ಸಂಯೋಜಿಸಿದರು.