ಕೊಕ್ಕಡ: ಮಾಯಿಲಕೋಟೆ ದೈವಸ್ಥಾನದಿಂದ ಕಳ್ಳತನ:ಭಕ್ತರ ಕೈಗೆ ಸಿಕ್ಕಿಬಿದ್ದ ಆರೋಪಿ ಹುಬ್ಬಳ್ಳಿಯ ಮಂಜುನಾಥ ಪೊಲೀಸ್ ವಶಕ್ಕೆ

0

ಭಕ್ತರ ಪ್ರಾರ್ಥನೆ ಫಲಿಸಿತೆ ?

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಾಯಿಲಕೊಟೆ ದೈವಸ್ಥಾನದ ಕಾಣಿಕೆ ಡಬ್ಬಿ ಕಳವುಗೈದು ಪರಾರಿಯಾಗುತ್ತಿದ್ದ ಕಳ್ಳನನ್ನು ಭಕ್ತರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ನ.10ರಂದು ಮಧ್ಯಾಹ್ನ ನಡೆದಿದೆ.


ಹುಬ್ಬಳ್ಳಿ ಮೂಲದ ಮಂಜುನಾಥ(19ವ.)ಬಂಧಿತ ಆರೋಪಿ. ನ.10ರಂದು ಮಧ್ಯಾಹ್ನ 2.30ರ ವೇಳೆಗೆ ದೈವಸ್ಥಾನದಿಂದ ದೊಡ್ಡದಾದ ಶಬ್ದವೊಂದು ಕೇಳಿಬಂದಿದ್ದು ಪರಿಸರದ ಭಕ್ತರು ದೈವಸ್ಥಾನಕ್ಕೆ ಬಂದಾಗ ಆರೋಪಿ ಮಂಜುನಾಥ ಕಾಣಿಕೆ ಡಬ್ಬಿಯೊಂದಿಗೆ ಪರಾರಿಯಾಗಲು ಯತ್ನಿಸಿದ್ದ. ಆದರೆ ಭಕ್ತರ ಕೈಗೆ ಸಿಕ್ಕಿಬಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈತ ಪುತ್ಯೆ ಎಂಬಲ್ಲಿಂದ ೩೫ ಸಾವಿರ ರೂ.ಬೆಲೆ ಬಾಳುವ ಸೈಕಲ್‌ವೊಂದನ್ನು ಕದ್ದಿದ್ದು ಎಂದು ವರದಿಯಾಗಿದೆ.

ಭಕ್ತರ ಪ್ರಾರ್ಥನೆ ಫಲಿಸಿತೆ ?:
ಮಾಯಿಲಕೋಟೆ ದೈವ ಸಾನಿಧ್ಯವು 2 ವರ್ಷದ ಹಿಂದೆ ಜೀರ್ಣೋದ್ದಾರಗೊಂಡಿತು. ಇಲ್ಲಿನ ದೈವಗಳ ಕಾರಣಿಕವೂ ಶಕ್ತಿಯುತವಾಗಿದೆ ಎಂಬ ನಂಬಿಕೆ ಭಕ್ತರಲ್ಲಿದೆ. 1 ತಿಂಗಳ ಹಿಂದೆ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಚಿಲ್ಲರೆ ಹಣ ದೋಚಲಾಗಿತ್ತು. ಭಕ್ತರ ಕಾಣಿಕೆ ಕಳವುಗೈದಿರುವ ಕಳ್ಳನ ಬಗ್ಗೆ 1 ತಿಂಗಳೊಳಗೆ ಸುಳಿವು ನೀಡುವಂತೆ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಗಿತ್ತು. ಇದೀಗ ಕಳ್ಳ ಸಿಕ್ಕಿಬಿದ್ದಿರುವುದರಿಂದ ಪ್ರಾರ್ಥನೆಗೆ ಫಲ ಸಿಕ್ಕಿದಂತಾಗಿದೆ ಎಂದು ಭಕ್ತರು ಅಭಿಪ್ರಾಯಿಸಿದ್ದಾರೆ.

LEAVE A REPLY

Please enter your comment!
Please enter your name here