ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿಯಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿಗೆ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಬಂದಿರುತ್ತದೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ
ಅಭಿನಯಗೀತೆ ತನಿಷಾ ಜೆ ಎನ್ (3) ಪ್ರಥಮ, ಕ್ಲೇ ಮಾಡೆಲಿಂಗ್ ಸಹರ್ಷ್ ವಿ ರೈ (4 )ಪ್ರಥಮ, ಲಘುಸಂಗೀತ ಅನ್ವಿತಾ ಎಂ(4) ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಈಶಾನ್ ಕೆ (4) ದ್ವಿತೀಯ, ಭಕ್ತಿಗೀತೆ ಈಶಾನ್ ಕೆ (4) ದ್ವಿತೀಯ, ಚಿತ್ರಕಲೆ ಸಹರ್ಷ್ ವಿ ರೈ (4) ದ್ವಿತೀಯ, ಆಶುಭಾಷಣ ಹನೀತ್ ಕುಮಾರ್ (4)ದ್ವಿತೀಯ, ಕಥೆ ಹೇಳುವುದು ಲಿಪಿ ಕೆ ಎಲ್ (1) ದ್ವಿತೀಯ, ಛದ್ಮವೇಷ ಸುಶಾನ್ ಎಸ್ ಭಂಡಾರಿ (3) ತೃತೀಯ, ಕನ್ನಡ ಕಂಠಪಾಠ ಮೋಕ್ಷ ಎನ್ ಕೆ (4) ತೃತೀಯ ,ಅರೇಬಿಕ್ ಧಾರ್ಮಿಕ ಪಠಣ ಫಾತಿಮಾ ಅಫ್ಸೀನ (4) ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಸಂಸ್ಥೆ ಪಡೆದುಕೊಂಡಿದೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕಥೆ ಹೇಳುವುದು ಶ್ರೀಮಾ ಕೆ ಎಚ್(7) ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಧನುಷ್ ಕೆ(5) ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಮುಹಮ್ಮದ್ ನೂಮನ್(5) ಪ್ರಥಮ, ಲಘು ಸಂಗೀತ ಧನುಷ್ ಕೆ (5) ಪ್ರಥಮ, ಛದ್ಮವೇಷ ಅಸ್ಮಿ ಕೆ ಪಿ (6) ಪ್ರಥಮ, ಭಕ್ತಿಗೀತೆ ಶರಣ್ಯ ಎನ್ (7) ಪ್ರಥಮ, ಆಶುಭಾಷಣ ಗಗನ್ ರಾಜ್ ಎಂ ಆರ್ (7)ಪ್ರಥಮ, ಹಿಂದಿ ಕಂಠಪಾಠ ಫಾತಿಮಾತ್ ಫೈರೂಝ(7) ಪ್ರಥಮ, ಚಿತ್ರಕಲೆ ಸಾನ್ವಿ ಶೆಟ್ಟಿ ಕೆ ಎಸ್ (7)ದ್ವಿತೀಯ, ಕ್ಲೇ ಮಾಡೆಲಿಂಗ್ ಸಾನ್ವಿ ಎಂ ಸಿ(7) ದ್ವಿತೀಯ, ಮಿಮಿಕ್ರಿ ಆರ್ಯನ್ ಪಿ(5) ದ್ವಿತೀಯ, ಕವನವಾಚನ ಗಗನ್ ರಾಜ್ ಎಂ ಆರ್ (7)ದ್ವಿತೀಯ, ಇಂಗ್ಲೀಷ್ ಕಂಠಪಾಠ ಶ್ರೀರತ್ ವಿ ರೈ (6) ದ್ವಿತೀಯ ಸ್ಥಾನಗಳನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಗೆ ಕಾರಣೀಭೂತರಾಗಿರುತ್ತಾರೆ.

ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಾಲಾ ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here