ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಸಲುವಾಗಿ ಉಪೇಕ್ಷಿತ ಬಂಧುಗಳ ಮನೆ ಮನೆಗೆ ದೀಪದ ಬೆಳಕು ಪ್ರದಾನ ಕಾರ್ಯಕ್ರಮ ‘ತುಡರ್’ ನ.12ರಂದು ಸಂಜೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ದೀಪ ಪ್ರಜ್ವಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಉಪೇಕ್ಷಿತ ಬಂಧುಗಳಿಗೆ ದೀಪ ಪ್ರದಾನ ಮಾಡಿದರು. ಅಲ್ಲಿ ಜ್ಯೋತಿ ಬೆಳಗಿದ ನಂದಾ ದೀಪವನ್ನು ಉರ್ಲಾಂಡಿಯಿಂದ ನಾಯರಡ್ಕದ ತನಕ ಪ್ರತಿ ಮನೆ ಮನೆಗಳಿಗೆ ತೆರಳಿ ಮನೆಗಳ ದೀಪ ಪ್ರಜ್ವಲಿಸಲಾಯಿತು.ಅದೇ ರೀತಿ ತೆಂಕಿಲ, ಶೇವಿರೆ, ಆನೆಮಜಲು, ಬ್ರಹ್ಮನಗರದಲ್ಲಿ ಮನೆ ಮನೆಗೆ ಭಜನೆ ಮೂಲಕ ತೆರಳಿ ದೀಪ ಪ್ರಜ್ವಲಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ಸುಬ್ರಾಯ ಪುಣಚ, ರವಿನಾರಾಯಣ, ಸಂತೋಷ್ ಬೋನಂತಾಯ, ಎಸ್.ಅಪ್ಪಯ್ಯ ಮಣಿಯಾಣಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಚಂದ್ರಕಾಂತ್ ಭಟ್, ಶ್ರೀಧರ್ ತೆಂಕಿಲ, ರಘುರಾಜ್, ಅಶೋಕ್ ಕುಂಬ್ಳೆ, ಶಿವಪ್ರಸಾದ್ ಭಟ್, ಅಶೋಕ್ ಬ್ರಹ್ಮನಗರ, ವಿಶಾಖ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.